ಹೊಸನಗರ ತಾಲೂಕಿಗೆ ಬೇಕಿದೆ ಹೊಸಬೆಳಕು

ಹೊಸನಗರದಲ್ಲಿ ೇತ್ರ ಮರುಸ್ಥಾಪನೆ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಅವರು ಲಾಂಛನ ಬಿಡುಗಡೆ ಮಾಡಿದರು. ಸ್ವಾಮಿರಾವ್​, ಜಿ.ಡಿ.ನಾರಾಯಣಪ್ಪ, ಚಿದಂಬರ ಹೂವಿನಕೋಣೆ, ಕೆ.ಜಿ.ಪ್ರಶಾಂತ್​ ಇತರರಿದ್ದರು.
ಹೊಸನಗರದಲ್ಲಿ ೇತ್ರ ಮರುಸ್ಥಾಪನೆ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಅವರು ಲಾಂಛನ ಬಿಡುಗಡೆ ಮಾಡಿದರು. ಸ್ವಾಮಿರಾವ್​, ಜಿ.ಡಿ.ನಾರಾಯಣಪ್ಪ, ಚಿದಂಬರ ಹೂವಿನಕೋಣೆ, ಕೆ.ಜಿ.ಪ್ರಶಾಂತ್​ ಇತರರಿದ್ದರು.
Published on
ಹೊಸನಗರ: ಕತ್ತಲಕೂಪದಲ್ಲಿ ನಲುಗುತ್ತಿರುವ ಹೊಸನಗರಕ್ಕೆ ಹೊಸಬೆಳಕು ಬೇಕಾಗಿದೆ. ಜಾತಿ, ಮತ, ಪಂಥ, ಧರ್ಮ, ರಾಜಕಾರಣ ಮೀರಿದ ಹೋರಾಟದ ಅಗತ್ಯವಿದೆ ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಗಾಯತ್ರಿ ಮಂದಿರದಲ್ಲಿ ಹೊಸನಗರ ವಿಧಾನಸಭಾ ೇತ್ರ ಮರುಸ್ಥಾಪನೆ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಹೋರಾಟದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇಂದಿನ ಪೂರ್ವಭಾವಿ ಸಭೆಯಲ್ಲಿ ತಾರತಮ್ಯ ಮರೆತು ಎಲ್ಲರೂ ಬೃಹತ್​ ಸಂಖ್ಯೆಯಲ್ಲಿ ಭಾಗವಹಿಸಿರುವುದು ಹೊಸ ಭರವಸೆ ಮೂಡಿಸಿದೆ. ಇದೇ ಹುಮ್ಮಸ್ಸು, ಹೋರಾಟದ ಮನೋಭಾವ ನಿರಂತರವಾಗಿರಬೇಕು ಎಂದರು.
ಹೊಸನಗರ ತಾಲೂಕು ಅವಕೃಪೆಗೆ ಒಳಗಾಗುತ್ತಿದೆ. ಇದಕ್ಕೆ ಸರ್ಕಾರ ಮಟ್ಟದಲ್ಲಿ ಪ್ರಭಾವ ಬಳಸಿ ಯೋಜನೆ ತರಬಲ್ಲ ನಾಯಕತ್ವ ವಿಫಲವಾಗಿದೆ. ಇಂದಿನ ಯುವಕರು ಮುಂಚೂಣಿಗೆ ಬರಬೇಕು. ಮಾಜಿ ಶಾಸಕ ಸ್ವಾಮಿರಾವ್​ ನೇತೃತ್ವದಲ್ಲಿ ಶ್ರೀದಲ್ಲಿ ಜಿಲ್ಲಾ ಕೇಂದ್ರಕ್ಕೆ ಪಾದಯಾತ್ರೆ ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಸಾಗರದ ಒಂದು ಭಾಗವಾಗಿ ಹೊಸನಗರವನ್ನು 2ನೇ ಬಾರಿಗೆ ಪ್ರತಿನಿಧಿಸುತ್ತಿದ್ದೇನೆ. ಹೋರಾಟದಲ್ಲಿ ಭಾಗಿಯಾಗುವುದಷ್ಟೇ ಅಲ್ಲ. ಹೋರಾಟಕ್ಕೆ ಆರ್ಥಿಕ ನೆರವನ್ನೂ ನೀಡುತ್ತೇನೆ ಎಂದು ಭರವಸೆ ನೀಡಿದರು.
ತೀರ್ಥಹಳ್ಳಿ ಶಾಸಕ ಆರಗ ಾನೇಂದ್ರ ಮಾತನಾಡಿ, ಹೊಸನಗರ ತಾಲೂಕಿಗೆ ಎಲ್ಲ ರೀತಿಯಿಂದಲೂ ಅನ್ಯಾಯವಾಗಿದೆ. ೇತ್ರದ ಹೋರಾಟಕ್ಕೆ ಎಲ್ಲ ರೀತಿಯಲ್ಲೂ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
ಮಾಜಿ ಶಾಸಕ ಹರತಾಳು ಹಾಲಪ್ಪ, ಜಿಪಂ ಮಾಜಿ ಅಧ್ಯ ಕಲಗೋಡು ರತ್ನಾಕರ್​, ಮಾಜಿ ಸಚಿವ ಕಿಮ್ಮನೆ ರತ್ನಾಕರ್​, ಮಾಜಿ ಶಾಸಕ ಬಿ.ಸ್ವಾಮಿ ರಾವ್​, ಜಿ.ಡಿ.ನಾರಾಯಣಪ್ಪ, ಪ್ರಮುಖರಾದ ತೀ.ನ.ಶ್ರೀನಿವಾಸ್​, ಚಿದಂಬರ ಹೂವಿನಕೋಣೆ, ಕೆ.ಜಿ.ಪ್ರಶಾಂತ್​, ಬಂಡಿ ರಾಮಚಂದ್ರ, ಎನ್​.ಆರ್​.ದೇವಾನಂದ್​, ಆಲವಳ್ಳಿ ವೀರೇಶ್​, ಈಶ್ವರಪ್ಪ ಗೌಡ, ಬಿ.ಜಿ.ಚಂದ್ರಮೌಳಿ, ಸುಬ್ರಹ್ಮಣ್ಯ ಮಾಸ್ತಿಕಟ್ಟೆ, ಹಾಲಗದ್ದೆ ಉಮೇಶ್​, ಹಂಜಾ ರಿಪ್ಪನ್​ಪೇಟೆ, ಕರುಣಾಕರ ಶೆಟ್ಟಿ, ವರ್ತೇಶ್​ ರಿಪ್ಪನ್​ಪೇಟೆ, ಎಂ.ಎನ್​.ಸುಧಾಕರ್​, ಸುಧೀಂದ್ರ ಪಂಡಿತ್​ ಮುಂತಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net