ಮಾದಾಪುರದಲ್ಲಿ ಹೋರಿ ಹಬ್ಬದ ವೈಭವ

ರಿಪ್ಪನ್‌ಪೇಟೆ ಸಮೀಪದ ಮಾದಾಪುರದಲ್ಲಿ ಆಯೋಜಿಸಿದ್ದ ಹೋರಿ ಬೆದರಿಸುವ ಅಖಾಡದಲ್ಲಿ ಮುನ್ನುಗ್ಗುತ್ತಿರುವ ಎತ್ತು.
ರಿಪ್ಪನ್‌ಪೇಟೆ ಸಮೀಪದ ಮಾದಾಪುರದಲ್ಲಿ ಆಯೋಜಿಸಿದ್ದ ಹೋರಿ ಬೆದರಿಸುವ ಅಖಾಡದಲ್ಲಿ ಮುನ್ನುಗ್ಗುತ್ತಿರುವ ಎತ್ತು.
Published on
ರಿಪ್ಪನ್‌ಪೇಟೆ: ಶನಿಪರಮೇಶ್ವರ ಹೋರಿ ಹಬ್ಬದ ಸಮಿತಿಯಿಂದ ಮಾದಾಪುರದಲ್ಲಿ ಆಯೋಜಿಸಿದ್ದ ಎರಡನೇ ವರ್ಷದ ಹೋರಿ ಬೆದರಿಸುವ ಹಬ್ಬ ಅದ್ದೂರಿಯಾಗಿ ಜರುಗಿತು.
ಸ್ಪರ್ಧೆಯಲ್ಲಿ ಹಾವೇರಿ, ರಾಣೆಬೆನ್ನೂರು, ಮಾಸೂರು, ಕಿಟ್ಟದಹಳ್ಳಿ, ಭದ್ರಾವತಿ, ಶಿರಾಳಕೊಪ್ಪ, ಹಾರನಹಳ್ಳಿ, ಆಯನೂರು, ಹೊನ್ನಾಳಿ, ಶಿಕಾರಿಪುರ ಮುಂತಾದೆಡೆಯಿಂದ 200ಕ್ಕೂ ಹೆಚ್ಚು ಹೋರಿಗಳು ಭಾಗವಹಿಸಿದ್ದವು. 200 ಮೀ. ಉದ್ದದ ನೇರ ಓಟದ ಅಖಾಡ ಸಿದ್ಧಗೊಳಿಸಿ, ಎರಡೂ ಕಡೆ ಭದ್ರವಾದ ತಡೆಬೇಲಿ ನಿರ್ಮಿಸಲಾಗಿತ್ತು. ವಿಭಿನ್ನವಾಗಿ ಶೃಂಗರಿಸಿದ್ದ ಹೋರಿಗಳನ್ನು ಒಂದಾದ ಮೇಲೊಂದರಂತೆ ತಂದು ಅಖಾಡಕ್ಕೆ ಇಳಿಸಿ ಓಡಿಸಲಾಗುತ್ತಿತ್ತು.
ಧ್ವನಿವರ್ಧಕದೊಂದಿಗೆ ಕ್ರೀಡಾಭಿಮಾನಿಗಳು ಕೂಗುತ್ತಿದ್ದ ಸದ್ದಿಗೆ ವಿಚಲಿತವಾಗುತ್ತಿದ್ದ ಹೋರಿಗಳು ನಾಗಾಲೋಟದಲ್ಲಿ ಮುನ್ನುಗ್ಗುತಿದ್ದವು. ಹೋರಿಗಳನ್ನು ಮಣಿಸಲು ಪೈಲ್ವಾನರು ನಾಮುಂದು, ತಾಮುಂದು ಎಂದು ಮುನ್ನುಗ್ಗುತ್ತಿದ್ದರು. ಹೋರಿಹಬ್ಬವನ್ನು ವೀಕ್ಷಿಸಲು ಸಾವಿರಾರು ಜನರು ಜಮಾಯಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net