ಗೃಹ ಸಚಿವರಿಗೆ ಕನಿಷ್ಠ ರಾಜಕೀಯ ಸಂಯಮವೇ ಇಲ್ಲ | RSS

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ
Published on

ಪ್ರಮುಖ ಮುಖ್ಯಾಂಶಗಳು

  • ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಗೌರವ ಉಳಿಸಿಕೊಂಡಿಲ್ಲ
  • ಆರ್‌ಎಸ್‌ಎಸ್ ಇಡೀ ಪ್ರಪಂಚವೇ ಒಪ್ಪಿಕೊಂಡಿರುವ ಜಾಗತಿಕ ವಿಚಾರಧಾರೆ
  • ಶಿವಮೊಗ್ಗದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿಕೆ
ಶಿವಮೊಗ್ಗ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಆರ್‌ಎಸ್‌ಎಸ್ ಕುರಿತ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ(B.Y.Raghavendra) ಹೇಳಿದರು. 
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅವರು ಪದೇಪದೆ ಇಂತಹ ಆರೋಪ ಮಾಡುತ್ತಾರೆ. ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಗೌರವವನ್ನು ಪ್ರಿಯಾಂಕ್ ಖರ್ಗೆ(Priyank Kharge) ಉಳಿಸಿಕೊಂಡಿಲ್ಲ ಎಂದು ಟೀಕಿಸಿದರು.
ಆರ್‌ಎಸ್‌ಎಸ್(RSS) ಒಂದು ಸಂಘಟನೆಯಲ್ಲ. ದೇಶದ ಜನ ಮತ್ತು ಇಡೀ ಪ್ರಪಂಚವೇ ಒಪ್ಪಿಕೊಂಡಿರುವ ಜಾಗತಿಕ ವಿಚಾರಧಾರೆ. ಸಂಘದ ದೇಶಭಕ್ತಿಯ ಪ್ರತಿಫಲದಿಂದಲೇ ಭಾರತ ಜಗತ್ತಿನಾದ್ಯಂತ ಹೆಮ್ಮೆಯಿಂದ ಮುನ್ನಡೆಯುತ್ತಿದೆ. ಆದರೆ ಗೃಹ ಸಚಿವ(Home Minister)ರಿಗೆ ಕನಿಷ್ಠ ರಾಜಕೀಯ ಸಂಯಮವೇ ಇಲ್ಲ. ಕಾಂಗ್ರೆಸ್ ಹೈಕಮಾಂಡ್ ಓಲೈಸಲು ಹಾಗೂ ಸಚಿವ ಸಂಪುಟದಲ್ಲಿ ತಮ್ಮ ಖುರ್ಚಿ ಮತ್ತು ಖಾತೆ ಭದ್ರಪಡಿಸಿಕೊಳ್ಳಲು ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net