ಕಳೆದ ಕೆಲ ವರ್ಷಗಳಲ್ಲಿ ಶಿವಮೊಗ್ಗದಲ್ಲಿ ಹೋಳಿಯ ರಂಗು ಹೆಚ್ಚಿದೆ. ಕೇವಲ ಬಣ್ಣ ಎರಚುವ, ಪರಸ್ಪರ ಶುಭಾಶಯ ಕೋರುವ ಬದಲು ಹೋಳಿ ಹಬ್ಬಕ್ಕೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ರೂಪ ನೀಡಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅನ್ಯ ರಾಜ್ಯದವರು, ಅದರಲ್ಲೂ ವಿಶೇಷವಾಗಿ ಗುಜರಾತ್, ರಾಜಸ್ತಾನ ಮುಂತಾದ ರಾಜ್ಯಗಳ ಜನರು ಇಲ್ಲಿ ವ್ಯಾಪಾರ ವಹಿವಾಟು ನಡೆಸಿಕೊಂಡು ಶಿವಮೊಗ್ಗ ನಗರದಲ್ಲೇ ನೆಲೆ ನಿಂತ ಕಾರಣ ಹೋಳಿ ಹಬ್ಬದ ಸಂಭ್ರಮ ಹೆಚ್ಚಾಗಿರುತ್ತದೆ.