ಸೊರಬ ಪಟ್ಟಣದಲ್ಲಿ ಹಿರಿಯ ಸಹಕಾರಿ ಎಚ್.ಎಸ್ ಮಂಜಪ್ಪ ದಂಪತಿಯನ್ನು ಸನ್ಮಾನಿಸಲಾಯಿತು. ರಾಜಪ್ಪ ಮಾಸ್ತರ್, ತೀ.ನ.ಶ್ರೀನಿವಾಸ್, ಅಶೋಕ್ ನಾಯಕ್, ಅಬ್ದುಲ್ ರಶೀದ್, ಶೇಖರಮ್ಮ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಜಪ್ಪ ಮಾಸ್ತರ್ ಅಭಿಮತ
ಹಿರಿಯ ಸಹಕಾರಿ ಮಂಜಪ್ಪ ಸರಳಜೀವಿ
ಸೊರಬ: ಸಹಕಾರಿ ಧುರೀಣ ಎಚ್.ಎಸ್.ಮಂಜಪ್ಪ ಮೊದಲಿನಿಂದಲೂ ಸರಳ ಜೀವನ, ಸಮಯ ಪಾಲನೆಗೆ ಹೆಚ್ಚು ಆದ್ಯತೆ ನೀಡುತ್ತಾ ಬಂದಿರುವ ವ್ಯಕ್ತಿ ಎಂದು ಪ್ರಗತಿಪರ ಸಂಟನೆಗಳ ಒಕ್ಕೂಟದ ಅಧ್ಯಕ್ಷ ರಾಜಪ್ಪ ಮಾಸ್ತರ್ ಹೇಳಿದರು.
ನಾಗರಿಕ ಸೇವಾ ಸನ್ಮಾನ ಪ್ರಶಸ್ತಿ ಪಡೆದ ಎಚ್.ಎಸ್. ಮಂಜಪ್ಪ ದಂಪತಿಯನ್ನು ಪಟ್ಟಣದ ಅವರ ನಿವಾಸದಲ್ಲಿ ಪ್ರಗತಿಪರ ಸಂಟನೆಗಳ ಒಕ್ಕೂಟದಿಂದ ಅಭಿನಂದಿಸಿ ಮಾತನಾಡಿದರು.
ತತ್ವ, ಸಿದ್ಧಾಂತಗಳನ್ನು ಎಂದಿಗೂ ಬಿಟ್ಟುಕೊಡದೆ ಜನ ಸೇವೆ ಮಾಡಿಕೊಂಡು ಬಂದಿದ್ದಾರೆ. ರಾಜಕೀಯವಾಗಿ ಅತ್ಯಂತ ದೊಡ್ಡ ಮಟ್ಟದಲ್ಲಿ ಪ್ರಭಾವ ಹೊಂದಿದ್ದರೂ ಅದನ್ನು ಎಂದಿಗೂ ದುರ್ಬಳಕೆ ಮಾಡಿಕೊಳ್ಳದೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಮಾರ್ಗದರ್ಶನ ನೀಡುತ್ತ ಜನಪರ ಕೆಲಸಗಳನ್ನು ಮಾಡಿದ್ದಾರೆ. ಮಾನವೀಯ ಮೌಲ್ಯಗಳು, ಸಂಬಂಧಗಳಿಗೆ ಹೆಚ್ಚು ಗೌರವ ನೀಡಿದ್ದಾರೆ. ಇವರಿಗೆ ಈ ಸನ್ಮಾನ, ಪುರಸ್ಕಾರಗಳು ದೊರೆತಿರುವುದು ಹೆಮ್ಮೆಯ ಸಂಗತಿ ಎಂದರು.