ರಿಪ್ಪನ್ಪೇಟೆ ಸಮೀಪದ ಹುಂಚದಲ್ಲಿ ಹಿಂದೂ ಸಮಾವೇಶ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ತಾಲೂಕು ಪ್ರಮುಖ ಅಶ್ವತ್ಥ್ ಅವರನ್ನು ಗೌರವಿಸಲಾಯಿತು. ವಿನಯ್ ಶೆಟ್ಟಿ, ಎಚ್.ಕೆ.ಅನಂತ್ ಇತರರಿದ್ದರು.
ರಿಪ್ಪನ್ಪೇಟೆ: ಜಗತ್ತಿನಲ್ಲಿ ಅನೇಕ ಧರ್ಮಗಳು ನಶಿಸಿಹೋಗಿರುವ ಕಾಲದಲ್ಲಿ ಹಲವು ಆಕ್ರಮಣಗಳ ನಡುವೆಯೂ ನಮ್ಮ ಸಂಸ್ಕೃತಿ ಚಿರಸ್ಥಾಯಿಯಾಗಿ ಉಳಿದಿದೆ ಎಂದು ವಾಗ್ಮಿ ಲೋಹಿತಾಶ್ವ ಕೇದಿಗೆರೆ ಹೇಳಿದರು.
ಹುಂಚದಲ್ಲಿ ಆರ್ಎಸ್ಎಸ್ ಶತಮಾನೋತ್ಸವ ಪ್ರಯುಕ್ತ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರಾನಂತರ ನಿಖರ ಇತಿಹಾಸ ಬೋಧನೆ, ಸಂಸ್ಕಾರಯುತ ಶಿಣ ನೀಡದಿರುವ ಪರಿಣಾಮ ನಮ್ಮತನ ಮರೆಯುವಂತಾಗಿದೆ ಎಂದರು.
ಸಾಮಾಜಿಕ ಮಾಧ್ಯಮಗಳು ಅನಗತ್ಯ ವಿಷಯಗಳನ್ನು ರಂಜಿಸುತ್ತಿರುವುದು ಜನರ ಮೇಲೆ ಹೆಚ್ಚು ಪ್ರಭಾವ ಬಿರುತ್ತಿದೆ. ಮನೆಯಲ್ಲಿ ರೂಢಿಗತವಾಗಿದ್ದ ಕೀರ್ತನೆ, ಪುರಾಣ ಪುಣ್ಯ ಕತೆಗಳು ಹಾಗೂ ಗುರುಹಿರಿಯರ ಒಡನಾಟ ಣವಾಗುತ್ತಿವೆ. ಇಂತಹ ಅವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸಲು ಹಿಂದೂ ಸಂಗಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಅನೇಕ ದಾರ್ಶನಿಕರು ಪುರಾತನ ಕಾಲದಿಂದ ಬೆಳೆಸಿದ ಸನಾತನ ಪರಂಪರೆಯನ್ನು ನಾವು ರಸಿದಲ್ಲಿ ಸಮಾಜ ಸದೃಢಗೊಂಡು ಭಾರತ ಬಲಿಷ್ಠವಾಗುತ್ತದೆ. ವಿಚಾರಗಳೇನೇ ಇರಲಿ ನಾವೆಲ್ಲ ಹಿಂದೂ ಎಂಬ ಮನೋಭಾವದಿಂದ ಸಂಟಿತರಾಗೋಣ ಎಂದರು.
ಹುಂಚ ಪ್ರಮುಖ ರಸ್ತೆಯಲ್ಲಿ ಪಥಸಂಚಲನ ನಡೆಯಿತು. ವಿನಯ್ ಶೆಟ್ಟಿ, ಅಶ್ವತ್ಥ್, ಎಚ್.ಕೆ.ಅನಂತ್, ಅಭಿಷೇಕ್ ಇತರರಿದ್ದರು.