ಶಿವಮೊಗ್ಗದಲ್ಲಿಯೇ ಹೈಕೋರ್ಟ್​ ಸಂಚಾರಿ ಪೀಠ ಸ್ಥಾಪಿಸಿ

ಚಂದ್ರಕಾಂತ ಪಾಟೀಲ್​
ಚಂದ್ರಕಾಂತ ಪಾಟೀಲ್​
Published on

ಪ್ರಮುಖ ಮುಖ್ಯಾಂಶಗಳು

  • ಚಂದ್ರಕಾಂತ್​ ಪಾಟೀಲ್​ ಒತ್ತಾಯ
  • ಶಿವಮೊಗ್ಗದಲ್ಲಿಯೇ ಹೈಕೋರ್ಟ್​ ಸಂಚಾರಿ ಪೀಠ ಸ್ಥಾಪಿಸಿ
ಶಿಕಾರಿಪುರ: ಮಂಗಳೂರಿನಲ್ಲಿ ಹೈಕೋರ್ಟ್​ ಪೀಠ ಸ್ಥಾಪನೆ ಮಾಡುವುದಕ್ಕಿಂತ ಶಿವಮೊಗ್ಗದಲ್ಲಿಯೇ ಹೈಕೋರ್ಟ್​ ಸಂಚಾರಿ ಪೀಠ ಸ್ಥಾಪಿಸಿ. ಇದರಿಂದ ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆೆಗಳಿಗೆ ಅನುಕೂಲ ಆಗಲಿದೆ ಎಂದು ಹೈಕೋರ್ಟ್​ ನ್ಯಾಯವಾದಿ ಚಂದ್ರಕಾಂತ್​ ಪಾಟೀಲ್​ ಸರ್ಕಾರಕ್ಕೆ ಒತ್ತಾಯಿಸಿದರು.
ಮಂಗಳೂರು ಸಂಚಾರಿ ಪೀಠದ ಸ್ಥಾಪನೆಯಿಂದ ಅನಾನುಕೂಲವಾಗಲಿದೆ. ಶಿವಮೊಗ್ಗ ಹಾಗೂ ಸಂಬಂಧಿಸಿದ ಸುತ್ತಮುತ್ತಲಿನ ಜಿಲ್ಲೆಗಳ ವ್ಯಾಜ್ಯಗಳೆಲ್ಲವೂ ಮಂಗಳೂರು ಸಂಚಾರಿ ಪೀಠಕ್ಕೆ ವರ್ಗಾವಣೆಯಾದರೆ, ಈ ಭಾಗದ ಜನರಿಗೆ ಮಂಗಳೂರಿಗೆ ಓಡಾಡಲು ಸರಿಯಾದ ಬಸ್​ಗಳ ವ್ಯವಸ್ಥೆ ಇರುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ಥಳಿಯ ವಕೀಲರಿಗೆ ಅನ್ಯಾಯವಾಗುವುದಲ್ಲದೆ ಕದಾರರು ಮಂಗಳೂರಿನ ಹೊಸ ವಕೀಲರನ್ನು ನೇಮಿಸಬೇಕಾಗುತ್ತದೆ. ಆದ್ದರಿಂದ ಶಿವಮೊಗ್ಗದಲ್ಲಿ ಹೈಕೋರ್ಟ್​ ಸಂಚಾರಿ ಪೀಠ ಸ್ಥಾಪನೆಯಾಗಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ ಸಂಚಾರಿ ಪೀಠಕ್ಕೆ ನಾವು ಹಲವಾರು ವರ್ಷಗಳಿಂದ ಹೋರಾಡುತ್ತಿದ್ದೇವೆ. ಶಿವಮೊಗ್ಗ ಸಂಚಾರಿ ಪೀಠ ಆಗಲೇಬೇಕು. ಈಗಾಗಲೇ ವಕೀಲರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಶಿವಮೊಗ್ಗ ಸಂಚಾರಿ ಪೀಠ ಸ್ಥಾಪನೆಯಾಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಇದರಿಂದ ಜನಸಾಮಾನ್ಯರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.
ವಕೀಲರಾದ ಮಧು ಹುಲ್ಮಾರ್​, ಮನೋಜ್​ ಕುಮಾರ್​, ರೈತ ಪತ್ತಿನ ಸಹಕಾರ ಸಂದ ಸದಸ್ಯರಾದ ಎಸ್​.ಪಿ.ಪಾಟೀಲ್​, ಎ.ಆರ್​. ಮೂರ್ತಿ, ವಿಶ್ವ ಮಾನವ ಹಕ್ಕುಗಳ ಸಂಸ್ಥೆ ಅಧ್ಯ ಆರ್​.ಪಿ.ಮಂಜುನಾಥ್​, ಪುಟ್ಟಪ್ಪ, ನಾಗರಾಜ್​, ಪ್ರದಿಪ್​, ಸುರೇಶ್​, ಗೋವಿಂದ ನಾಯ್ಕ , ಗುರುಮೂರ್ತಿ, ಚಂದ್ರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net