ಹೇಮರಡ್ಡಿ ಮಲ್ಲಮ್ಮನ ತಾಳ್ಮೆ, ಆತ್ಮಸ್ಥೈರ್ಯ ಸರ್ವರಿಗೂ ಪಾಠ | Hemaraddi Mallamma Jayanti

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಶಾಸಕ ಎಸ್.ಎನ್.ಚನ್ನಬಸಪ್ಪ ಪುಷ್ಪನಮನ ಸಲ್ಲಿಸಿದರು. ಡಾ. ನಾಗರಾಜ್ ಪರಿಸರ, ಕುಮಾರಸ್ವಾಮಿ, ಹೊನ್ನಲಿಂಗಪ್ಪ, ಎಚ್.ಉಮೇಶ್ ಇದ್ದರು.
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಶಾಸಕ ಎಸ್.ಎನ್.ಚನ್ನಬಸಪ್ಪ ಪುಷ್ಪನಮನ ಸಲ್ಲಿಸಿದರು. ಡಾ. ನಾಗರಾಜ್ ಪರಿಸರ, ಕುಮಾರಸ್ವಾಮಿ, ಹೊನ್ನಲಿಂಗಪ್ಪ, ಎಚ್.ಉಮೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಭಕ್ತಿ, ತಾಳ್ಮೆಯ ಪ್ರತೀಕ
  • ಜಿಲ್ಲಾಡಳಿತದಿಂದ ಸಾಧ್ವಿ, ಶಿವಶರಣೆಯ ಜಯಂತ್ಯುತ್ಸವ
  • ಶಿವಮೊಗ್ಗದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಅಭಿಮತ
ಶಿವಮೊಗ್ಗ: ಶಿವಶರಣೆ ಹೇಮರಡ್ಡಿ ಮಲ್ಲಮ್ಮ(Hemaraddi Mallamma) ಭಕ್ತಿ ಮತ್ತು ತಾಳ್ಮೆಯ ಪ್ರತೀಕ. ಅವರ ಪರಹಿತ ಚಿಂತನೆಗಳು ನಮ್ಮೆಲ್ಲರಿಗೂ ಮಾದರಿ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಎಂದು ಅಭಿಪ್ರಾಯಪಟ್ಟರು.
ನಗರದ ಕುವೆಂಪು ರಂಗಮಂದಿರ(Kuvempu rangamandira)ದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಡ್ಡಿ ಸಮಾಜದ ಆಶ್ರಯದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಮಲ್ಲಮ್ಮನ ಜೀವನ ಚರಿತ್ರೆಯು ತಾಳ್ಮೆಯ ಪಾಠವನ್ನು ಕಲಿಸುತ್ತದೆ. ಅವರು ನಮ್ಮಲ್ಲಿ ಆತ್ಮಸ್ಥೈರ್ಯ ತುಂಬಿ, ಬದುಕಿಗೆ ಶಕ್ತಿ ತುಂಬಿದ್ದಾರೆ. ಅವರ ಅನುಭವಗಳು, ಪವಾಡಗಳನ್ನು ಕೈಗನ್ನಡಿಯಾಗಿ ಹಿಡಿದು ನಾವು ಮುನ್ನಡೆಯಬೇಕಿದೆ. ನಮ್ಮ ಪರಂಪರೆ, ನಂಬಿಕೆಗಳೇ ನಮ್ಮ ಅಸ್ಮಿತೆಯಾಗಿದ್ದು, ಅಂತಹ ನಮ್ಮ ನಂಬಿಕೆಗಳ ಮೇಲಿನ ಗದಾ ಪ್ರಹಾರ ನಿಲ್ಲಬೇಕು. ಮಹಿಳೆಯರೂ ಸೇರಿ ಎಲ್ಲರಿಗೂ ಮಾದರಿಯಾಗಿರುವ ಮಲ್ಲಮ್ಮ ಅವರ ಜೀವನ ಚರಿತ್ರೆ(Biography)ಯನ್ನು ತಿಳಿದುಕೊಳ್ಳಬೇಕು ಎಂದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನಾಗರಾಜ್ ಪರಿಸರ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಅವರು ಮಹಿಳಾ ಕುಲಕ್ಕೆ ಆದರ್ಶ. ಅವರ ಅತ್ತೆ ಎಷ್ಟೇ ಕಿರುಕುಳ ನೀಡಿದರೂ ಅವರನ್ನು ಗೌರವದಿಂದ ಕಾಣುತ್ತಿದ್ದರು. ಆಕೆಯ ಗಂಡನನ್ನು ಹುಚ್ಚ ಎನ್ನುತ್ತಿದ್ದರೂ, ಆತನೇ ತನ್ನ ಪಾಲಿನ ಮಲ್ಲಿಕಾರ್ಜುನ ಎಂದು ಪರಿಗಣಿಸಿ ಬದುಕುತ್ತಾರೆ. ಎಷ್ಟೇ ಕಷ್ಟ, ತೊಂದರೆಗಳು ಬಂದರೂ, ಸಾಧ್ವಿಮಣಿಯಾಗಿ ಬದುಕುತ್ತಾರೆ. ಸಹನೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಅವರೇ ಸಾಕ್ಷಿ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಘದ ಕಾರ್ಯದರ್ಶಿ ಹೊನ್ನಲಿಂಗಪ್ಪ, ಮುಖಂಡರು ಹಾಜರಿದ್ದರು.
"

ಮಹನೀಯರ ಜಯಂತಿ ಆಚರಣೆಗಿಂತ ಅವರು ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಅದು ಸಾರ್ಥಕವಾಗುತ್ತದೆ. ಮಲ್ಲಮ್ಮ ಅವರು ಕೇವಲ ಸ್ತ್ರೀ ಕುಲಕ್ಕೆ ಮಾತ್ರವಲ್ಲ, ಇಡೀ ಮನುಕುಲಕ್ಕೆ ಮಾದರಿಯಾಗಿದ್ದಾರೆ. ಹೆಣ್ಣು ಮತ್ತು ಗಂಡು ಕುಟುಂಬದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.

— ಕುಮಾರಸ್ವಾಮಿ, ಹೇಮರಡ್ಡಿ ಮಲ್ಲಮ್ಮ ಸಂಘದ ಅಧ್ಯಕ್ಷ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net