ಬಿಜೆಪಿಗೆ ಮರಳುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಹೃದಯ ಬಿಜೆಪಿಗೆ ಮೀಸಲು. ಪೂರ್ಣ ಮನಸ್ಸು ಬಿಜೆಪಿಯಲ್ಲೇ ಇದೆ. ಆದರೆ ಪ್ರಸ್ತುತ ಬಿಜೆಪಿಯಲ್ಲಿ ಅನೇಕ ಸಮಸ್ಯೆಗಳಿದ್ದು, ಅವುಗಳನ್ನು ನಾನು ಬಹಳ ಬೇಸರದಿಂದ ಹೇಳುತ್ತಿದ್ದೇನೆ. ಸದ್ಯ ರಾಜ್ಯ ಬಿಜೆಪಿ(State Bjp)ಯಲ್ಲಿ ಸಂಘಟನೆ ಸರಿಯಾಗಿಲ್ಲ. ಪಕ್ಷದಲ್ಲಿ ಎಲ್ಲವೂ ಸರಿಯಾದ ಬಳಿಕ, ಹಿರಿಯರೊಂದಿಗೆ ಚರ್ಚಿಸಿ ನಾನು ಮತ್ತೆ ಬಿಜೆಪಿಗೆ ಸೇರುತ್ತೇನೆ ಎಂದರು.