ಆರೋಗ್ಯ ಸೇವೆ ತೃಪ್ತಿ ತಂದಿದೆ | Farewell

ಸಾಗರ ತಾಲೂಕಿನ ಉಳ್ಳೂರು ಆರೋಗ್ಯ ಕೇಂದ್ರದಿಂದ ವರ್ಗಾವಣೆಯಾದ ವೈದ್ಯೆ ನಂದಿನಿ ಅವರನ್ನು ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆಯಿಂದ ಸನ್ಮಾನಿಸಲಾಯಿತು. ವಸೀಂ, ದ್ರೌಪದಿ, ರಾಘವೇಂದ್ರ ಇತರರಿದ್ದರು.
ಸಾಗರ ತಾಲೂಕಿನ ಉಳ್ಳೂರು ಆರೋಗ್ಯ ಕೇಂದ್ರದಿಂದ ವರ್ಗಾವಣೆಯಾದ ವೈದ್ಯೆ ನಂದಿನಿ ಅವರನ್ನು ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆಯಿಂದ ಸನ್ಮಾನಿಸಲಾಯಿತು. ವಸೀಂ, ದ್ರೌಪದಿ, ರಾಘವೇಂದ್ರ ಇತರರಿದ್ದರು.
Published on
ಸಾಗರ: ತಾಲೂಕಿನ ಉಳ್ಳೂರು ಭಾಗದ ಜನರಿಗೆ ಆರೋಗ್ಯ ಸೇವೆ ನೀಡಿದ್ದು ತುಂಬ ಸಂತೋಷ ತಂದಿದೆ. ಗ್ರಾಮೀಣ ಜನರು ಇದನ್ನು ತಮ್ಮದೇ ಆಸ್ಪತ್ರೆ ಎಂಬ ಭಾವನೆಯಿಂದ ಬೆಳೆಸಿಕೊಂಡು ಬಂದಿದ್ದಾರೆ ಎಂದು ಉಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ನಂದಿನಿ ಹೇಳಿದರು.
ಉಳ್ಳೂರಿನಿಂದ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ನವಶಕ್ತಿ ವೇದಿಕೆ ಮತ್ತು ಗ್ರಾಮಸ್ಥರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಾಕಷ್ಟು ಇರುತ್ತವೆ. ಆದರೆ ಉತ್ತಮ ಸೇವೆ ನೀಡಿದಾಗ ಜನಮನದಲ್ಲಿ ಉಳಿಯಲು ಸಾಧ್ಯ. ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ಸವಾಲುಗಳು ಇರುತ್ತದೆ. ಸ್ಥಳೀಯರ ಸಹಕಾರ ಇದ್ದರೆ ಜನರಿಗೆ ಗುಣಮಟ್ಟದ ಸೇವೆ ನೀಡಲು ಸಾಧ್ಯ ಎಂದರು.
ವೇದಿಕೆ ಅಧ್ಯಕ್ಷ ವಸೀಂ ಉಳ್ಳೂರು ಮಾತನಾಡಿ, ಕಳೆದ ನಾಲ್ಕೂವರೆ ವರ್ಷದಿಂದ ಡಾ. ನಂದಿನಿ ಅವರು ವೈದ್ಯಾಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಿಗೆ ವೈದ್ಯರು ಬರುವುದು ಕಡಿಮೆ. ನಾವು ಅವರನ್ನು ಗೌರವದಿಂದ ನಡೆಸಿಕೊಂಡರೆ ಅವರಿಂದ ಉತ್ತಮ ಸೇವೆ ಪಡೆಯಲು ಸಾಧ್ಯ ಎಂದು ಹೇಳಿದರು.
ದ್ರೌಪದಿ, ರಾಘವೇಂದ್ರ, ಆಸೀಫ್, ತನ್ವೀರ್, ಗೋವರ್ಧನ, ನೂರಲ್ಲಾ, ಅಸ್ಪಾಕ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net