ಶಿವಮೊಗ್ಗ ಪಾಲಿಕೆ ಸಭಾಂಗಣದಲ್ಲಿ ಪೌರ ಕಾರ್ಮಿಕರಿಗೆ ಮುರಳಿ ಅಶೋಕ ಸಾಲಪ್ಪ ಆರೋಗ್ಯ ವಿಮೆ ಕಾರ್ಡ್ ವಿತರಿಸಿದರು. ಕೆ.ಮಾಯಣ್ಣ ಗೌಡ, ಟಿ.ಎಂ.ಕುಮಾರ್, ಕೃಷ್ಣಮೂರ್ತಿ, ಗೋವಿಂದಪ್ಪ, ಡಿ.ಎಂ.ರಾಘವೇಂದ್ರ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆ
ನೇರ ಪಾವತಿ ಪೌರ ಕಾರ್ಮಿಕರಿಗೆ ಕಾರ್ಡ್ ವಿತರಣೆ
ಮುರಳಿ ಅಶೋಕ ಸಾಲಪ್ಪ ಹೇಳಿಕೆ
ಶಿವಮೊಗ್ಗ: ಪೌರ ಕಾರ್ಮಿಕರಿಗೆ ವಸತಿ (housing) ಯೋಜನೆ, ಆರೋಗ್ಯ ವಿಮೆ (insurence) ಜಾರಿಯಾಗಿದೆ. ಮುಂಬರುವ ದಿನಗಳಲ್ಲಿ ಕಸ ಗುಡಿಸಲು ಯಂತ್ರೋಪಕರಣ (machinary) ಬಳಕೆ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಇದರಿಂದಾಗಿ ಪೌರ ಕಾರ್ಮಿಕರಿಗೆ ಧೂಳು ಹಾಗೂ ಗಲೀಜಿನಿಂದ ರಕ್ಷಣೆ ಸಿಗಲಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳಿ ಅಶೋಕ ಸಾಲಪ್ಪ ಹೇಳಿದರು.
ನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ನೇರ ಪಾವತಿ ಪೌರ ಕಾರ್ಮಿಕರಿಗೆ ಆರೋಗ್ಯ ವಿಮೆ ಕಾರ್ಡ್ ವಿತರಿಸಿ ಮಾತನಾಡಿದ ಅವರು, ಪೌರ ಕಾರ್ಮಿಕರು ಆರೋಗ್ಯಕ್ಕಾಗಿ ಹೆಚ್ಚು ಹಣ ವ್ಯಯಿಸಬೇಕಾದ ಸನ್ನಿವೇಶವಿದೆ. ಹೀಗಾಗಿ ನಗದುರಹಿತ ಚಿಕಿತ್ಸೆ ಒದಗಿಸಲು ಆರೋಗ್ಯ ವಿಮೆ ಯೋಜನೆ ಜಾರಿಗೊಳಿಸಲಾಗಿದೆ ಎಂದರು.
ವಿಮಾ ಯೋಜನೆ ಮೂಲಕ ಪೌರ ಕಾರ್ಮಿಕರಿಗೆ ಐದು ಲಕ್ಷ ರೂ.ವರೆಗೆ ಬಹುತೇಕ ಕಾಯಿಲೆಗಳಿಗೆ ಚಿಕಿತ್ಸೆ ದೊರೆಯಲಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ನಿವೃತ್ತಿ ನಂತರ ವಿಮಾ ಸೌಲಭ್ಯ ಚಾಲ್ತಿಯಲ್ಲಿರುವುದಿಲ್ಲ ಎಂದು ಹೇಳಿದರು.
1990ರ ದಶಕದಲ್ಲಿ ಪೌರಕಾರ್ಮಿಕರ ಗುತ್ತಿಗೆ ಪದ್ಧತಿ ಬಂದಿತು. ಗುತ್ತಿಗೆ ವ್ಯವಸ್ಥೆಯನ್ನು ನಾನು ವಿರೋಧಿಸಿದ್ದೆ. ಹೀಗಾಗಿ 2013ರ ಚುನಾವಣಾ ಪ್ರಣಾಳಿಕೆಯಲ್ಲಿ ನೇರ ಪಾವತಿ ಕಾರ್ಮಿಕರ ಘೋಷಣೆಯ ಭರವಸೆ ನೀಡಲಾಯಿತು. 2017ರಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು. ಕಳೆದ ವರ್ಷ 20 ಸಾವಿರ ಪೌರ ಕಾರ್ಮಿಕರನ್ನು ಕಾಯಂ ಮಾಡಲಾಯಿತು ಎಂದರು.
ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಐಪಿಡಿ ಸಾಲಪ್ಪನವರು ಹೋರಾಡಿದ್ದರು. ಅವರ ನೇತೃತ್ವದ ವರದಿ ಆಧರಿಸಿ ಡಿ.ದೇವರಾಜ ಅರಸು ಸಿಎಂ ಆಗಿದ್ದ ವೇಳೆ ಪೌರ ಕಾರ್ಮಿಕರೆಂದು ನಾಮಕರಣ ಮಾಡಿದ್ದರು. ಸಾಲಪ್ಪ ಅವರ ಸ್ಮರಣಾರ್ಥ ಬೆಂಗಳೂರಿನಲ್ಲಿ ಐಪಿಡಿ ಸಾಲಪ್ಪ ಸ್ಮಾರಕ ಭವನ ನಿರ್ಮಿಸಲಾಗುವುದು. ಪೌರ ಕಾರ್ಮಿಕರು ಬೆಂಗಳೂರಿಗೆ ಬಂದಾಗ ಇಲ್ಲಿ ತಂಗಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಗೋವಿಂದಪ್ಪ ಮಾತನಾಡಿ, ಲೋಡರ್ಸ್, ಕ್ಲೀನರ್ಸ್, ಸ್ವೀಪರಗಳಿಗೂ ಈ ಯೋಜನೆಯನ್ನು ವಿಸ್ತರಿಸಬೇಕೆಂದು ಮನವಿ ಮಾಡಿದರು.
ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ, ವಿಮಾ ಕಂಪನಿ ಸಂಯೋಜಕ ಕೃಷ್ಣಮೂರ್ತಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಿ.ಎಂ.ರಾಘವೇಂದ್ರ, ಎಇಇ ಪ್ರಭಾಕರ ಇತರರಿದ್ದರು.
ಸಾಫ್ಟ್‌ವೇರ್ ಸಿಬ್ಬಂದಿಯ ಸೌಲಭ್ಯ
ಈ ಯೋಜನೆಯಲ್ಲಿ ಆರೋಗ್ಯ ಮತ್ತು ಅಪಘಾತ ವಿಮೆ ಎರಡೂ ಸೇರಿವೆ. ಪೌರ ಕಾರ್ಮಿಕರಿಗೆ ನೀಡಿರುವ ಕಾರ್ಡನ್ನು ಸ್ಕಾೃನ್ ಮಾಡಿದರೆ ಕಾರ್ಮಿಕರಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಲಭ್ಯವಾಗುತ್ತವೆ. ಇಂತಹ ವಿಮಾ ಯೋಜನೆಗಳನ್ನು ಈ ಹಿಂದೆ ಸಾಫ್ಟ್‌ವೇರ್ ಕಂಪನಿ ಸಿಬ್ಬಂದಿಗೆ ಮಾತ್ರ ನೀಡಲಾಗಿತ್ತು. ಅತ್ಯುತ್ತಮ ಆರೋಗ್ಯ ವಿಮಾ ಯೋಜನೆಯೊಂದನ್ನು ಪೌರ ಕಾರ್ಮಿಕರಿಗೆ ನೀಡಬೇಕೆಂದು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳಿ ಅಶೋಕ ಸಾಲಪ್ಪ ಬಹಳಷ್ಟು ಪ್ರಯತ್ನಿಸಿದ್ದರು. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ಕುಮಾರ್ ಹೇಳಿದರು.
"
ಪೌರ ಕಾರ್ಮಿಕರಿಗೆ, ಸಫಾಯಿ ಕರ್ಮಚಾರಿಗಳಿಗೆ ಉತ್ತಮವಾದ ಆರೋಗ್ಯ ವಿಮಾ ಪಾಲಿಸಿಯನ್ನು ವಿನ್ಯಾಸಗೊಳಿಸಲಾಗಿದೆ. ಭಾರತದಲ್ಲಿ ಈ ರೀತಿಯ ನಗದುರಹಿತ ಆರೋಗ್ಯ ವಿಮೆ ಇದೇ ಮೊದಲು. ಶಿವಮೊಗ್ಗದ ಪ್ರತಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆಯಬಹುದಾಗಿದೆ.