ಪೊಲೀಸ್‌ ಠಾಣೆಯಲ್ಲಿ ಮುಖ್ಯ ಪೇದೆ ನೇಣು ಬಿಗಿದು ಆತ್ಮಹತ್ಯೆ । Suicide

ಆತ್ಮಹತ್ಯೆ ಮಾಡಿಕೊಂಡ ಪಶ್ಚಿಮ ಸಂಚಾರ ಠಾಣೆ ಮುಖ್ಯ ಪೇದೆ ಮೊಹಮದ್‌ ಝಕ್ರಿಯ.
ಆತ್ಮಹತ್ಯೆ ಮಾಡಿಕೊಂಡ ಪಶ್ಚಿಮ ಸಂಚಾರ ಠಾಣೆ ಮುಖ್ಯ ಪೇದೆ ಮೊಹಮದ್‌ ಝಕ್ರಿಯ.
Published on
ಶಿವಮೊಗ್ಗ: ನಗರದ ಪಶ್ಚಿಮ ಸಂಚಾರ ಠಾಣೆಯಲ್ಲಿ ಬುಧವಾರ ರಾತ್ರಿ ಪೊಲೀಸ್‌ ಮುಖ್ಯ ಪೇದೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾರೆ. 
ಮೊಹಮದ್‌ ಝಕ್ರಿಯ (55) ಮೃತ ಮುಖ್ಯ ಪೇದೆ(Head Constable).  ಕಳೆದ ಕೆಲವು ದಿನದಿಂದ ಮೊಹಮದ್‌ ಝಕ್ರಿಯ ರಜೆ ತೆಗೆದುಕೊಂಡಿದ್ದರು. ಮೂರು ದಿನದ ಹಿಂದಷ್ಟೆ ಕೆಲಸಕ್ಕೆ ಹಾಜರಾಗಿದ್ದು, ಬುಧವಾರ ರಾತ್ರಿ ಶಿವಮೊಗ್ಗ ಬಸ್‌ ನಿಲ್ದಾಣದ ಬಳಿ ಕೆಲಸ ನಿರ್ವಹಿಸಿ ಠಾಣೆಗೆ ವಾಪಸಾಗಿದ್ದರು ಎನ್ನಲಾಗಿದೆ.
ರಾತ್ರಿ ಠಾಣೆಯ ಹಿಂಬದಿಯ ಸೆಲ್‌(sell)ಗಳಿರುವ ಜಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್‌ ಸೇರಿ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೊಹಮದ್‌ ಝಕ್ರಿಯ ಅವರ ಕುಟುಂಬದವರು ಕೂಡ ಠಾಣೆ ಮುಂದೆ ಜಮಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net