22ಕ್ಕೆ ಹವ್ಯಕ ಶಿಕ್ಷಕರ ಸಮಾವೇಶ | pressmeet

ಎಂ.ಎಂ.ತಿಮ್ಮಪ್ಪ
ಎಂ.ಎಂ.ತಿಮ್ಮಪ್ಪ
Published on
ಸಾಗರ: ಅಖಿಲ ಹವ್ಯಕ ಮಹಾಸಭಾದಿಂದ ಫೆ.22ರಂದು ರಾಘವೇಶ್ವರ ಸಭಾಭವನದಲ್ಲಿ ಬೆಳಗ್ಗೆ 6.30ರಿಂದ ರಾತ್ರಿ 9.30ರವರೆಗೆ ಶಿವಮೊಗ್ಗ ಜಿಲ್ಲಾ ಹವ್ಯಕ ಶಿಕ್ಷಕ ಸಮಾವೇಶ ಜ್ಞಾನಮ್ ಆಯೋಜಿಸಲಾಗಿದೆ ಎಂದು ಸಮಾವೇಶದ ಸಂಚಾಲಕ ಎಂ.ಎಂ.ತಿಮ್ಮಪ್ಪ ಹೇಳಿದರು.
ಅಂಗನವಾಡಿಯಿಂದ ವಿಶ್ವವಿದ್ಯಾಲಯ ಹಂತದವರೆಗೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರನ್ನು ಒಂದೆಡೆ ಸೇರಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ. ಬೆಳಗ್ಗೆ 7ರಿಂದ 9ರವರೆಗೆ ಗಣಪತಿ ಹವನ, ಗಣಪತಿ ಅಥರ್ವಶೀರ್ಷ ಪಾರಾಯಣ ನಡೆಯಲಿದೆ. ನಂತರ ಸಮಾವೇಶವನ್ನು ಸಾಹಿತಿ ಭುವನೇಶ್ವರಿ ಹೆಗಡೆ ಉದ್ಘಾಟಿಸುವರು. ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಅಧ್ಯಕ್ಷತೆ ವಹಿಸುವರು. ಹಿರಿಯ ಪತ್ರಕರ್ತ ವಿನಾಯಕ ಭಟ್ ಮೂರೂರು ಭಾಗವಹಿಸುವರು. ಬೆಳಗ್ಗೆ 11ರಿಂದ ಪ್ರಚಲಿತ ಶಿಕ್ಷಣ ವ್ಯವಸ್ಥೆ ಮತ್ತು ಹವ್ಯಕ ಶಿಕ್ಷಕರು ವಿಷಯ ಕುರಿತ ಶಿಕ್ಷಣ ಮಂಥನದ ಅಧ್ಯಕ್ಷತೆಯನ್ನು ಕೆ.ಜಿ.ಮಂಜುನಾಥ್ ವಹಿಸುವರು. ದೇವೇಂದ್ರ ಬೆಳೆಯೂರು ಸಮನ್ವಯ ಮಾಡಲಿದ್ದಾರೆ. ಡಾ. ಸುಮಿತ್ರಾ ಭಟ್, ಸೃಜನ್ ಗಣೇಶ್ ಹೆಗಡೆ ವಿಚಾರ ಮಂಡಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಂಸ್ಕಾರಯುತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ವಿಷಯ ಕುರಿತು ಅಕ್ಷಯ ಗೋಖಲೆ ಉಪನ್ಯಾಸ ನೀಡುವರು. ಮಧ್ಯಾಹ್ನ ಪಟ್ಟಾಭಿರಾಮ ಸುಳ್ಯ ಅವರಿಂದ ಮಿಮಿಕ್ರಿ ಏರ್ಪಡಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿನ ಅವಕಾಶಗಳು ವಿಷಯ ಕುರಿತು ಡಾ. ಲಕ್ಷ್ಮೀಶ್ ಮತ್ತು ಮಹಾಬಲೇಶ್ವರ ಹೆಗಡೆ ವಿಷಯ ಮಂಡಿಸುವರು. ಅ.ಪು.ನಾರಾಯಣಪ್ಪ, ವಿದುಷಿ ವಸುಧಾ ಶರ್ಮ ಭಾಗವಹಿಸುವರು. ನಂತರ ವಿಶೇಷ ಪುರಸ್ಕಾರ ಪಡೆದ ಶಿಕ್ಷಕರಿಗೆ ಸನ್ಮಾನ, ಸಾಂಸ್ಕೃತಿಕ ಸೌರಭ, ಸಂಜೆ 4.45ಕ್ಕೆ ಸಾಧಕ ಶಿಕ್ಷಕರಿಗೆ ಸನ್ಮಾನ ಮತ್ತು ಸಮಾರೋಪ ಕಾರ್ಯಕ್ರಮ ಆಯೋಜಿಸಲಾಗಿದೆ. ಡಾ. ಗಿರಿಧರ ಕಜೆ ಅಧ್ಯಕ್ಷತೆ ವಹಿಸುವರು. ಡಾ. ಜಿ.ಎಲ್.ಹೆಗಡೆ, ಎಚ್.ಎಸ್.ವಿದ್ಯಾಧರ ಉಪಸ್ಥಿತರಿರುವರು. ಸಂಜೆ 6.30ರಿಂದ ಜ್ಯೂನಿಯರ್ ಶಂಕರ್ ಗಿಲಿಗಿಲಿ ಮ್ಯಾಜಿಕ್ ನಡೆಸಿಕೊಡುವರು ಎಂದರು.
ಮಹಾಸಭಾ ನಿರ್ದೇಶಕ ಹು.ಭಾ.ಅಶೋಕ್ ಮಾತನಾಡಿ, ಡಾ. ಗಿರಿಧರ ಕಜೆ ಅಧ್ಯಕ್ಷತೆಯಲ್ಲಿ ಮಹಿಳಾ ಸಮಾವೇಶ, ವಕೀಲರು, ಇಂಜಿನಿಯರ್, ವೈದ್ಯರು, ಶಿಕ್ಷಕರ ಸಮಾವೇಶ ಅಯೋಜಿಸುವ ಮೂಲಕ ಸಂಘಟನೆಯನ್ನು ಇನ್ನಷ್ಟು ಸಮಾಜದ ಕಡೆ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.
ಡಾ. ಶ್ರೀಪಾದ ಹೆಗಡೆ, ಎಸ್.ಟಿ.ರತ್ನಾಕರ, ಎಚ್.ಎಸ್.ರಮೇಶ್, ರಾಜಾರಾಂ, ವಿನಾಯಕ ಹೆಗಡೆ, ರಘುನಂದನ್ ಪಟೇಲ್, ವಿನಾಯಕ ಹೆಗಡೆ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net