ಸರ್ಕಾರ ಕಾರ್ಮಿಕ ಸಂಹಿತೆ ಕೈಬಿಡಲಿ I govt labour

ರಾಜ್ಯ ಸರ್ಕಾರ ಕನಿಷ್ಠ ವೇತನ ಅಧಿಸೂಚನೆ ಹೊರಡಿಸಬೇಕೆಂದು ಒತ್ತಾಯಿಸಿ ಸಿಐಟಿಯುನ ಎಂ.ನಾರಾಯಣ್, ಷಣ್ಮುಖಪ್ಪ, ಎಂ.ಹನುಮಮ್ಮ, ನಾಗರತ್ನಾ, ರಾಕೇಶ್, ಮುನಿರಾಜು, ತುಳಸಿಪ್ರಭಾ ಮತ್ತಿತರರು ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಕನಿಷ್ಠ ವೇತನ ಅಧಿಸೂಚನೆ ಹೊರಡಿಸಬೇಕೆಂದು ಒತ್ತಾಯಿಸಿ ಸಿಐಟಿಯುನ ಎಂ.ನಾರಾಯಣ್, ಷಣ್ಮುಖಪ್ಪ, ಎಂ.ಹನುಮಮ್ಮ, ನಾಗರತ್ನಾ, ರಾಕೇಶ್, ಮುನಿರಾಜು, ತುಳಸಿಪ್ರಭಾ ಮತ್ತಿತರರು ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಐಟಿಯು ಜಿಲ್ಲಾ ಸಮಿತಿ ಪ್ರಮುಖರ ಒತ್ತಾಯ
  • ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
  • ಕನಿಷ್ಠ ವೇತನ ಪರಿಷ್ಕರಿಸಿ ಜಾರಿಗೊಳಿಸಲಿ
ಶಿವಮೊಗ್ಗ: ರಾಜ್ಯ ಸರ್ಕಾರ (government) ಕಾರ್ಮಿಕರ ಬೇಡಿಕೆಗೆ ಸ್ಪಂದಿಸಿ 4 ಕಾರ್ಮಿಕ (labour) ಸಂಹಿತೆಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿ ಸಿಐಟಿಯು (citu) ಜಿಲ್ಲಾ ಸಮಿತಿ ಪ್ರಮುಖರು ಗುರುವಾರ ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ವೇತನ ಸಂಹಿತೆ, ಕರಡು ನಿಯಮಗಳು-2026ರ ಕುರಿತು ಕಾರ್ಮಿಕ ಸಂಘಗಳ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಕೇಳಿದ್ದ ರಾಜ್ಯ ಸರ್ಕಾರ ಜ.23ರಂದು ಅಂತಿಮ ಕರಡು ನಿಯಮ ಪ್ರಕಟಿಸಿದೆ. ಆದರೆ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೈ ಬಿಡಬೇಕೆಂಬುದು ನಮ್ಮ ಬೇಡಿಕೆ ಎಂದರು.
ರಾಜ್ಯದ ಅನುಸೂಚಿತ ಉದ್ದಿಮೆಗಳಿಗೆ ಕನಿಷ್ಠ ವೇತನ ಪ್ರಕಟಣೆಗೆ ಒತ್ತಾಯಿಸಲಾಗಿತ್ತು. ಆದರೆ ಈವರೆಗೆ ಪ್ರಕಟವಾಗಿಲ್ಲ. ಈಗಿರುವ ಕನಿಷ್ಠ ವೇತನ ಸಂಹಿತೆ ಕಾನೂನುಬದ್ಧವಾಗಿಲ್ಲ. ಕನಿಷ್ಠ ವೇತನ ಪರಿಷ್ಕರಣೆಯಾಗಿ ಏಳು ವರ್ಷ ಕಳೆದಿವೆ. ಲಕ್ಷಾಂತರ ದುರ್ಬಲ ಕಾರ್ಮಿಕ ವರ್ಗಕ್ಕೆ ಆರ್ಥಿಕ ಸ್ವಾವಲಂಬನೆ ಖಾತ್ರಿಪಡಿಸುವ ಕನಿಷ್ಠ ವೇತನದ ಪ್ರಕಟಣೆಯನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಅಸಂಘಟಿತ, ಸಣ್ಣ, ಮಧ್ಯಮ ಉತ್ಪಾದನಾ ಘಟಕಗಳಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರಲ್ಲಿ ಭರವಸೆ ಮೂಡಿಸಿದ ಸರ್ಕಾರದ ಕನಿಷ್ಠ ವೇತನ ಮರುವಿಮರ್ಶೆ ಪ್ರಕ್ರಿಯೆ ಭರವಸೆಯಾಗೇ ಉಳಿದಿದೆ. ತಕ್ಷಣ ಕಾರ್ಮಿಕ ಕಾಯ್ದೆಗಳಿಗೆ ಸಂಬಂಧಿಸಿದ ಶಿಫಾರಸನ್ನು ಜಾರಿಗೊಳಿಸುವಂತೆ ಆಗ್ರಹಿಸಿದರು.
ಸಿಐಟಿಯು ಜಿಲ್ಲಾ ಸಮಿತಿ ಸಂಚಾಲಕ ಎಂ.ನಾರಾಯಣ್, ಸಹಸಂಚಾಲಕಿ ಎಂ.ಹನುಮಮ್ಮ, ಪ್ರಮುಖರಾದ ಷಣ್ಮುಖಪ್ಪ, ಸುಂದರ್, ನಾಗರತ್ನಾ, ತುಳಸಿಪ್ರಭಾ, ರಾಕೇಶ್, ಕೆ.ಎಲ್.ರಾವ್, ಮುನಿರಾಜು, ಬಂಗಾರಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net