ಕಲಾವಿದರಿಗೆ ಗೋವಿಂದ ಭಟ್ ಸ್ಫೂರ್ತಿ | tribute meeting

ಯಕ್ಷಗಾನ ಕಲಾವಿದ ಗೋವಿಂದ ಭಟ್ ಅವರ ಭಾವಚಿತ್ರಕ್ಕೆ ಶಾಸಕ ಆರಗ ಜ್ಞಾನೇಂದ್ರ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ವೀಣಾ ಶರ್ಮಾ, ಕಡಿದಾಳು ಪ್ರಕಾಶ್, ಸಂದೇಶ್ ಜವಳಿ ಇದ್ದರು.
ಯಕ್ಷಗಾನ ಕಲಾವಿದ ಗೋವಿಂದ ಭಟ್ ಅವರ ಭಾವಚಿತ್ರಕ್ಕೆ ಶಾಸಕ ಆರಗ ಜ್ಞಾನೇಂದ್ರ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ವೀಣಾ ಶರ್ಮಾ, ಕಡಿದಾಳು ಪ್ರಕಾಶ್, ಸಂದೇಶ್ ಜವಳಿ ಇದ್ದರು.
Published on
ತೀರ್ಥಹಳ್ಳಿ: ಖ್ಯಾತ ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದ ಭಟ್ ಅಗಲಿಕೆ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದ ನಟಮಿತ್ರರು ಹವ್ಯಾಸಿ ಕಲಾತಂಡದಿಂದ ಗೋಪಾಲ ಗೌಡ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಯುಗಾದಿ ರಂಗೋತ್ಸವದ ಸಮಾರೋಪ ಸಮಾರಂಭದಲ್ಲಿ ಗೋವಿಂದ ಭಟ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ವೇದ, ಉಪನಿಷತ್ತು ಅಧ್ಯಯನದೊಂದಿಗೆ ಸನಾತನ ಧರ್ಮದ ಪ್ರತಿಪಾದಕರಾಗಿದ್ದರು. ಕೇಂದ್ರ ಸಂಗೀತ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಅವರು, ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ ಅರ್ಧ ಶತಮಾನಗಳ ಪರ್ಯಂತ ಸೇವೆ ಸಲ್ಲಿಸಿದ್ದು ಯುವ ಕಲಾವಿದರಿಗೆ ಪ್ರೇರಕರೂ ಆಗಿದ್ದರು ಎಂದರು.
ರಾಷ್ಟ್ರ ಮಟ್ಟಕ್ಕೆ ಏರುವ ಮೂಲಕ ನಾಟಕ ಕಲೆಯ ಬಗ್ಗೆ ನಾಡಿನ ಜನರು ತೀರ್ಥಹಳ್ಳಿ ಕಡೆ ನೋಡುವಂತೆ ಮಾಡಿದ ನಟಮಿತ್ರರು ಹವ್ಯಾಸಿ ಕಲಾತಂಡದ ಸಾಧನೆ ಪ್ರಶಂಸನೀಯ ಎಂದು ಅಭಿಪ್ರಾಯಪಟ್ಟರು.
ನವದೆಹಲಿಯ ರಾಷ್ಟ್ರೀಯ ನಾಟಕ ಅಕಾಡೆಮಿ ಬೆಂಗಳೂರು ಕೇಂದ್ರದ ನಿರ್ದೇಶಕಿ ವೀಣಾ ಶರ್ಮಾ ಮಾತನಾಡಿ, ಪ್ರೇಕ್ಷಕರ ಮೆಚ್ಚುಗೆಯೇ ಕಲಾವಿದರಿಗೆ ಸ್ಫೂರ್ತಿ. ಆದರೆ ಕಲಾವಿದರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಬದುಕುವ ವಾತಾವರಣ ನಿರ್ಮಾಣ ಮಾಡುವುದು ಸಮಾಜದ ಹೊಣೆ ಎಂದರು.
ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ನಟಮಿತ್ರರು ತಂಡದ ಅಧ್ಯಕ್ಷ ಸಂದೇಶ್ ಜವಳಿ, ಕುವೆಂಪು ಪ್ರತಿಷ್ಠಾನದ ಸಮಕಾಯದರ್ಶಿ ಕಡಿದಾಳು ಪ್ರಕಾಶ್, ಪುರುಷೋತ್ತಮ ತಲವಾಟ, ಪಿ.ವಿ.ಗುರುರಾಜ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net