ಸ್ವಯಂ ಉದ್ಯಮಕ್ಕೆ ಸರ್ಕಾರದ ನೆರವು

ಭದ್ರಾವತಿಯಲ್ಲಿ ಫಲಾನುಭವಿಗಳಿಗೆ ಶಾಸಕ ಬಿ.ಕೆ.ಸಂಗಮೇಶ್ವರ ಹೊಲಿಗೆ ಯಂತ್ರ ವಿತರಿಸಿದರು. ಬಿ.ಕೆ.ಮೋಹನ್, ಬಸವರಾಜ್ ಆನೆಕೊಪ್ಪ, ಎಸ್.ಕುಮಾರ್, ಬಿ.ಎಸ್.ಗಣೇಶ್ ಇತರರಿದ್ದರು.
ಭದ್ರಾವತಿಯಲ್ಲಿ ಫಲಾನುಭವಿಗಳಿಗೆ ಶಾಸಕ ಬಿ.ಕೆ.ಸಂಗಮೇಶ್ವರ ಹೊಲಿಗೆ ಯಂತ್ರ ವಿತರಿಸಿದರು. ಬಿ.ಕೆ.ಮೋಹನ್, ಬಸವರಾಜ್ ಆನೆಕೊಪ್ಪ, ಎಸ್.ಕುಮಾರ್, ಬಿ.ಎಸ್.ಗಣೇಶ್ ಇತರರಿದ್ದರು.
Published on
ಭದ್ರಾವತಿ: ಬಡವರು ಸ್ವಂತ ಉದ್ದಿಮೆ ಆರಂಭಿಸಿ ಜೀವನ ನಿರ್ವಹಣೆ ಮಾಡಿಕೊಳ್ಳಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ಹೊಲಿಗೆ ಯಂತ್ರ ವಿತರಿಸುತ್ತಿದೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
ಶಾಸಕರ ಗೃಹ ಕಚೇರಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಿಂದ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿ, ಪ್ರತಿಯೊಬ್ಬರೂ ಸ್ವಂತ ದುಡಿಮೆಯಿಂದ ಜೀವನ ಸಾಗಿಸಬೇಕು. ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಜನರಿಗೆ ವಿಶೇಷ ಸೌಲಭ್ಯ ಒದಗಿಸುತ್ತಿದೆ ಎಂದು ತಿಳಿಸಿದರು.
33 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್.ಕುಮಾರ್, ನಗರಸಭೆ ಸದಸ್ಯ ಬಿ.ಕೆ.ಮೋಹನ್, ಬಸವರಾಜ್ ಆನೆಕೊಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಎಸ್.ಗಣೇಶ್, ಇಲಾಖೆ ಜಿಲ್ಲಾ ವ್ಯವಸ್ಥಾಪಕ ಕೆ.ಪಿ.ಪ್ರದೀಪ್‌ಕುಮಾರ್, ಸಹಾಯಕ ಅಧಿಕಾರಿ ಭರ್ಮಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net