ಫೆ.6ರಿಂದ 8ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಉತ್ಸವದಲ್ಲಿ ವಿಶೇಷವಾಗಿ ದೇವಸ್ಥಾನದ ನೂತನ ವಿಮಾನ ಗೋಪುರ ನಿರ್ಮಾಣಕ್ಕೆ ಮೈಸೂರು ರಾಜ ವಂಶಸ್ಥ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭೂಮಿಪೂಜೆ ನೆರವೇರಿಸುವರು.