ಭದ್ರಾವತಿ: ಯೋಗವು ಭಾರತದಲ್ಲಿ ಋಷಿಮುನಿಗಳ ಕಾಲದಿಂದಲೂ ಆಚರಣೆಯಲ್ಲಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್ ಹೇಳಿದರು.
ಬಿಜೆಪಿ ನಗರ ಮಂಡಲ ಹಾಗೂ ಎಸ್‌ಸಿ, ಎಸ್‌ಟಿ ಮೋರ್ಚಾದಿಂದ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿ, ವಿಶ್ವನಾಯಕ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ವಿಶ್ವಮಾನ್ಯತೆ ಪಡೆದಿದೆ. ನಮ್ಮ ಆರೋಗ್ಯ ಹಾಗೂ ಮಾನಸಿಕ ಸ್ವಾಸ್ಥತೆಗಾಗಿ ನಾವೆಲ್ಲರೂ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕು. ಈ ಬಾರಿ ನರೇಂದ್ರ ಮೋದಿ ಅವರು ವೃದ್ಧಾಪ್ಯದಲ್ಲೂ ಉತ್ತಮ ಆರೊಗ್ಯ ಹಾಗೂ ಸುಸ್ಥಿರ ಜೀವನಕ್ಕಾಗಿ ಯೋಗ ಎಂಬ ಕರೆ ನೀಡಿದ್ದಾರೆ ಎಂದರು.
ಅಂತಾರಾಷ್ಟ್ರೀಯ ಯೋಗಪಟು ಡಿ.ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಯೋಗಾಸನ ಮಾಡಲಾಯಿತು. ರಾಜಶೇಖರ್ ಉಪ್ಪಾರ್, ಸುರೇಶಪ್ಪ, ರಘುರಾವ್, ಕವಿತಾರಾವ್, ನಾಗಮಣಿ, ಜಯಲಕ್ಷ್ಮೀ, ವಿಶ್ವನಾಥ್ ಇತರರಿದ್ದರು.