ಶಿಲೀಂಧ್ರಗಳು ಮತ್ತು ದುಂಡಾಣುವಿನ ರೋಗಾಣುಗಳು ಗಾಳಿಯ ಮುಖಾಂತರ, ಮಳೆಯ ಹನಿಯ ಜತೆಗೆ ಇತರ ಗಿಡಗಳಿಗೂ ಹರಡುತ್ತದೆ. ಶೇ.80-95ರಷ್ಟು ತೇವಾಂಶ, ರಾತ್ರಿ ವೇಳೆ 15-22 ಡಿಗ್ರಿ ಸೆಲ್ಸಿಯಸ್‌ನಷ್ಟು ತಗ್ಗುವ ಉಷ್ಣಾಂಶ, ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುವ ಸಾರಜನಕ ಗೊಬ್ಬರ ಬೆಂಕಿ ರೋಗಕ್ಕೆ ಪ್ರಮುಖ ಕಾರಣವಾಗಿದೆ. ಬೆಳಗ್ಗೆ ಇಬ್ಬನಿಯ ವಾತಾವರಣ, ದಿನವಿಡೀ ಮೋಡ ಕವಿದಿರುವುದು, ಶುಂಠಿಯ ಸಾಲುಗಳ ನಡುವಿನ ಕಡಿಮೆ ಅಂತರ, ಹೆಚ್ಚು ಮಳೆ, ಆಗಾಗ ಬೀಳುವ ಮಳೆಯೂ ಶುಂಠಿಯ ರೋಗ ಹೆಚ್ಚಳಕ್ಕೆ ಕಾರಣವಾಗಿದೆ. ಒಟ್ಟಾರೆಯಾಗಿ ಬದಲಾದ ಹವಾಮಾನ ಶುಂಠಿ ಬೆಳೆಗಾರರಿಗೆ ಶಾಪವಾಗಿ ಪರಿಣಮಿಸಿದೆ.