ಪ್ರತಿಭಾನ್ವಿತ ಮಕ್ಕಳಿಗೆ ಸೂಕ್ತ ಪ್ರೋತ್ಸಾಹ ಅಗತ್ಯ

ಸೊರಬ ತಾಲೂಕಿನ ಆನವಟ್ಟಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಜೀವಮಾನ ಸಾಧನೆಗೆ ಎಂ.ಸ್ನೇಹಪ್ರಭಾ ಸಾಹುಕಾರ್ ಅವರನ್ನು ಸನ್ಮಾನಿಸಲಾಯಿತು. ಕಾರ್ತಿಕ್ ಸಾಹುಕಾರ್, ಎಚ್.ಸಿ.ಸಂಪತ್‌ಕುಮಾರ್, ಟಿ.ಪಿ.ಅಜಿತ್‌ಕುಮಾರ್ ಇತರರಿದ್ದರು.
ಸೊರಬ ತಾಲೂಕಿನ ಆನವಟ್ಟಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಜೀವಮಾನ ಸಾಧನೆಗೆ ಎಂ.ಸ್ನೇಹಪ್ರಭಾ ಸಾಹುಕಾರ್ ಅವರನ್ನು ಸನ್ಮಾನಿಸಲಾಯಿತು. ಕಾರ್ತಿಕ್ ಸಾಹುಕಾರ್, ಎಚ್.ಸಿ.ಸಂಪತ್‌ಕುಮಾರ್, ಟಿ.ಪಿ.ಅಜಿತ್‌ಕುಮಾರ್ ಇತರರಿದ್ದರು.
Published on
ಸೊರಬ: ಪಾಲಕರು ಮಕ್ಕಳ ಮೇಲೆ ಒತ್ತಡ ಹಾಕದೆ ಅವರಲ್ಲಿನ ಪ್ರತಿಭೆ ಗುರುತಿಸಿ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಯುವಜನ ಸಂಘದ ಸಂಸ್ಥಾಪಕ ಅಧ್ಯಕ್ಷ ಕಾರ್ತಿಕ್ ಸಾಹುಕಾರ್ ಹೇಳಿದರು.
ತಾಲೂಕಿನ ಆನವಟ್ಟಿಯಲ್ಲಿ ತಾಲೂಕು ಯುವಜನ ಸಂಘ, ರೋಟರಿ ಸಿಟಿ ಸೆಂಟರ್ ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ ಆನವಟ್ಟಿ ಘಟಕದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಕೆಗೆ ಸಾಕಷ್ಟು ಅವಕಾಶಗಳಿದ್ದು, ಎಸ್‌ಎಸ್‌ಎಲ್‌ಸಿ, ಪಿಯು ಶಿಕ್ಷಣ ಜೀವನದ ಬಹುಮುಖ್ಯ ಘಟ್ಟ. ಇಂತಹ ವೇಳೆಯಲ್ಲಿ ಭವಿಷ್ಯಕ್ಕೆ ಪೂರಕ ಶಿಕ್ಷಣ ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಡಿ.ಎಸ್.ಶಂಕರ್ ಶೇಟ್ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದರಿಂದ ಇತರರಿಗೂ ಪ್ರೇರಣೆಯಾಗುತ್ತದೆ ಎಂದರು. ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ 80 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜೀವಮಾನ ಸಾಧನೆಗೆ ಎಂ.ಸ್ನೇಹಪ್ರಭಾ ಸಾಹುಕಾರ್ ಅವರನ್ನು ಸನ್ಮಾನಿಸಲಾಯಿತು.
ಯುವಜನ ಸಂಘದ ತಾಲೂಕು ಅಧ್ಯಕ್ಷ ಎಚ್.ಸಿ.ಸಂಪತ್ ಕುಮಾರ್, ಆನವಟ್ಟಿ ಘಟಕದ ಅಧ್ಯಕ್ಷ ಟಿ.ಪಿ.ಅಜಿತ್ ಕುಮಾರ್, ಸರಿತಾ ಕಾರ್ತಿಕ್, ಸಲೀಂ ಬಾಷಾ, ಮಲ್ಲಿಕಾರ್ಜುನ್ ಗುತ್ತೇರ್, ಆರ್.ಸಿ.ಪಾಟೀಲ್, ಎನ್.ಅಭಿಲಾಶ್, ಮಂಜುನಾಥ್, ಕೇಶವ್ ನಾಯಕ್, ಮಹಾಂತೇಶ್, ಎಚ್.ಸತೀಶ್, ಶಿವಕುಮಾರ್, ಬಸವನ ಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net