ಸಮಾಜಮುಖಿ ಕಾರ್ಯಗಳಿಗೆ ಕೈಜೋಡಿಸಿ

ಜೆಸಿಐ ಶಿಕಾರಿಪುರ ಚಂದನ ಘಟಕದಿಂದ ಪೌರಕಾರ್ಮಿಕರಿಗೆ ಪರಿಸರಸ್ನೇಹಿ ಸ್ಟೀಲ್ ಬಾಟಲ್‌ಗಳನ್ನು ವಿತರಿಸಲಾಯಿತು. ಶಾಂತಾರಾಮ್ ಶೇಟ್, ಪಾಂಡುರಂಗ, ಭಾಗ್ಯಾ, ವೀರೇಶ್ ಇತರರಿದ್ದರು.
ಜೆಸಿಐ ಶಿಕಾರಿಪುರ ಚಂದನ ಘಟಕದಿಂದ ಪೌರಕಾರ್ಮಿಕರಿಗೆ ಪರಿಸರಸ್ನೇಹಿ ಸ್ಟೀಲ್ ಬಾಟಲ್‌ಗಳನ್ನು ವಿತರಿಸಲಾಯಿತು. ಶಾಂತಾರಾಮ್ ಶೇಟ್, ಪಾಂಡುರಂಗ, ಭಾಗ್ಯಾ, ವೀರೇಶ್ ಇತರರಿದ್ದರು.
Published on
ಶಿಕಾರಿಪುರ: ಸಮಾಜಮುಖಿ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಸಮಾಜದ ಋಣವನ್ನು ಸೇವಾ ಕಾರ್ಯಗಳ ಮೂಲಕ ತೀರಿಸಬೇಕು ಎಂದು ಜೆಸಿಐ ಶಿಕಾರಿಪುರ ಚಂದನ ಘಟಕದ ಅಧ್ಯಕ್ಷ ಶಾಂತಾರಾಮ್ ಶೇಟ್ ಹೇಳಿದರು.
ಅಂತಾರಾಷ್ಟ್ರೀಯ ಮಾನವನ ಕರ್ತವ್ಯ ದಿನಾಚರಣೆ ಪ್ರಯುಕ್ತ ಜೆಸಿಐ ಶಿಕಾರಿಪುರ ಚಂದನ ಘಟಕ ಆಯೋಜಿಸಿದ್ದ ಸರಣಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಾಗರಿಕ ಕರ್ತವ್ಯದ ಕುರಿತು ಮಾತನಾಡಿದರು. ಸಾರ್ವಜನಿಕರಲ್ಲಿ ಜವಾಬ್ದಾರಿಯ ಅರಿವು ಮೂಡಿಸಲು ವಿವಿಧ ಸರಣಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿದ್ದು, ಹಕ್ಕುಗಳಷ್ಟೇ ಕರ್ತವ್ಯಗಳೂ ಮುಖ್ಯ ಎಂದು ತಿಳಿಸಿದರು..
ಚಂದನ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಪಟ್ಟಣದ ಪ್ರಸಿದ್ಧ ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನದ ಒಳಾಂಗಣವನ್ನು ಸ್ವಚ್ಛಗೊಳಿಸಿದರು. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದರ ಬಗ್ಗೆ ಜಾಗೃತಿ ಅಭಿಯಾನ ನಡೆಸಲಾಯಿತು. ಪೌರಕಾರ್ಮಿಕರನ್ನು ಗೌರವಿಸಿ ಪರಿಸರಸ್ನೇಹಿ ಸ್ಟೀಲ್ ನೀರಿನ ಬಾಟಲಿಗಳನ್ನು ವಿತರಿಸಲಾಯಿತು. ಸಮಾಜದಲ್ಲಿ ಮಾನವನ ಕರ್ತವ್ಯಗಳು ಹಾಗೂ ಸಾಮಾಜಿಕ ಜವಾಬ್ದಾರಿಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶೇಷ ಜೆಸಿಐ ಪೆಟಿಷನ್ ಅಭಿಯಾನ ನಡೆಸಲಾಯಿತು.
ಉಪಾಧ್ಯಕ್ಷ ಪಾಂಡುರಂಗ, ಭಾಗ್ಯಾ, ವೀರೇಶ್, ಸಂಕೇತ್, ಸಂತೋಷ್ ಆರ್.ಶೇಟ್, ಪ್ರವೀಣ್ ಹದಡಿ, ಮಧುಕೇಶ್ವರ್, ಲಕ್ಷ್ಮಣ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net