ಉತ್ತಮ ಶಿಕ್ಷಣ ಪಡೆದು ಸಮಾಜಮುಖಿ ಕೆಲಸ ಮಾಡಿ

ನವೋದಯ ಮತ್ತು ಮುರಾರ್ಜಿ ಶಾಲೆಗೆ ಆಯ್ಕೆಯಾದ ಮಕ್ಕಳಿಗೆ ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನಮಠದ ಶ್ರೀಗಳು ಆಶೀರ್ವದಿಸಿದರು. ಪ್ರಕಾಶ್ ಜೋಯ್ಸ ಮತ್ತಿತರರಿದ್ದರು.
ನವೋದಯ ಮತ್ತು ಮುರಾರ್ಜಿ ಶಾಲೆಗೆ ಆಯ್ಕೆಯಾದ ಮಕ್ಕಳಿಗೆ ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನಮಠದ ಶ್ರೀಗಳು ಆಶೀರ್ವದಿಸಿದರು. ಪ್ರಕಾಶ್ ಜೋಯ್ಸ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನವೋದಯ, ಮುರಾರ್ಜಿ ಶಾಲೆಗೆ ಆಯ್ಕೆಯಾದ ಮಕ್ಕಳಿಗೆ ಅಭಿನಂದನೆ
ರಿಪ್ಪನ್‌ಪೇಟೆ: ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ಕೊರತೆ ಇದ್ದು, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿಕೊಡುವ ಶಾಲೆಗಳಲ್ಲಿ ಮುರಾರ್ಜಿ ಶಾಲೆಗಳು ಮಾದರಿಯಾಗಿವೆ ಎಂದು ಹೊಂಬುಜ ಕ್ಷೇತ್ರದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ನವೋದಯ, ಮುರಾರ್ಜಿ ಶಾಲೆಗೆ ಆಯ್ಕೆಯಾದ ಮಕ್ಕಳಿಗೆ ಹೊಂಬುಜ ಜೈನಮಠದಲ್ಲಿ ಆಯೋಜಿಸಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮುಂದಿನ ದಿನಗಳಲ್ಲಿ ಉನ್ನತ ಸ್ಥಾನ ತಲುಪಿದ ಮೇಲೆ ಸಮಾಜದ ಅಬಿವೃದ್ಧಿಗೆ ಪೂರಕವಾದ ಕಾಯಕ ಮಾಡಬೇಕು. ಉತ್ತಮ ಶಿಕ್ಷಣ ಪಡೆದು ಯಶಸ್ಸು ಸಾಧಿಸುವಂತೆ ಕಿವಿಮಾತು ಹೇಳಿದರು.
ಶಿಬಿರದ ಸಂಸ್ಥಾಪಕ ಪ್ರಕಾಶ್ ಜೋಯ್ಸ ಮಾತನಾಡಿ, ಸೆಪ್ಟೆಂಬರ್‌ನಿಂದ ಜನವರಿವರೆಗೆ ಪ್ರತಿ ಭಾನುವಾರ ತರಗತಿ ಜತೆಗೆ ಆನ್‌ಲೈನ್ ಪರೀಕ್ಷೆಗಳು, ಪ್ರೇರಣಾತ್ಮಕ ತರಗತಿ, ಕ್ವಿಜ್ ಸ್ಪರ್ಧೆ, ಪಿಎಂಶ್ರೀ ಜವಾಹರ್ ನವೋದಯ ವಿದ್ಯಾಲಯ ಭೇಟಿ ಮಕ್ಕಳ ಸಾಧನೆಗೆ ಪೂರಕವಾಗಿದೆ ಎಂದರು.
ಗಾಜನೂರಿನ ನವೋದಯ ಶಾಲೆಗೆ ಶಿಬಿರದ ವಿದ್ಯಾರ್ಥಿಗಳಾದ ಎಸ್.ಸುಧನ್ವ, ಕೆ.ಪಿ.ಆರಾಧ್ಯ, ಎಸ್.ಎನ್.ಮೈತ್ರಿ ಆಯ್ಕೆಯಾಗಿದ್ದಾರೆ. ಮುರಾರ್ಜಿ ವಸತಿ ಶಾಲೆಗೆ ಪ್ರಣತಿ, ಟಿ.ಎಂ.ಶಾನವಿ, ಎಚ್.ಎಂ.ಅನ್ವಿತಾ, ಎಚ್.ಪಿ.ಅರ್ನವ್, ಧನುಷ್, ಕೆ.ಕೆ.ಸಖಿ, ಎನ್.ಸೀಕ್ಷಿತ್, ಪಿ.ಅನನ್ಯಾ, ಪಿ.ಅಪೂರ್ವಾ, ಎಚ್.ಎಸ್.ಕೀರ್ತಿ, ಮೈತ್ರಿ, ಸುಧನ್ವ ಮೊದಲ ಪಟ್ಟಿಯಲ್ಲಿ ತೇರ್ಗಡೆ ಆಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net