ಜೀವಕಾರುಣ್ಯದ ಸೆಲೆ ಗೌತಮ ಬುದ್ಧ I gowtama budha

ಶಿವಮೊಗ್ಗ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಬುದ್ಧ ಜಯಂತಿಯನ್ನು ಸಿ.ಎಸ್.ಚಂದ್ರಭೂಪಾಲ ಉದ್ಘಾಟಿಸಿದರು. ಎಚ್.ಉಮೇಶ್, ಎನ್.ಚಂದ್ರಶೇಖರ್, ಲಿಂಗರಾಜ್ ಇದ್ದರು.
ಶಿವಮೊಗ್ಗ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಬುದ್ಧ ಜಯಂತಿಯನ್ನು ಸಿ.ಎಸ್.ಚಂದ್ರಭೂಪಾಲ ಉದ್ಘಾಟಿಸಿದರು. ಎಚ್.ಉಮೇಶ್, ಎನ್.ಚಂದ್ರಶೇಖರ್, ಲಿಂಗರಾಜ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸ್ಕೃತಿ ಉನ್ನತೀಕರಿಸುವ ತುಡಿತ ಬುದ್ಧನಲ್ಲಿತ್ತು
  • ಸಿರಿವಂತೆ ಚಂದ್ರಶೇಖರ್ ಅಭಿಮತ
  • ಜಿಲ್ಲಾಡಳಿತದಿಂದ ಜಯಂತ್ಯುತ್ಸವ ಆಚರಣೆ
ಶಿವಮೊಗ್ಗ: ಜನನ, (birth) ಬದುಕೆಂದರೆ ಏನೆಂಬ ಪ್ರಶ್ನೆ (question) ಬುದ್ಧನನ್ನು ಸದಾ ಕಾಡುತ್ತಿತ್ತು. ಮನುಷ್ಯನ ಆಸೆಗೆ ಮಿತಿ ಇರಬೇಕು ಎನ್ನುತ್ತಲೇ ಆಸೆಯೇ ದುಃಖಕ್ಕೆ ಮೂಲ ಎಂದು ಸಾರಿದವನು ಬುದ್ಧ. ಸಾವಿಲ್ಲದ ಮನೆಯಿಂದ ಸಾಸಿವೆ ತರುವ ಪ್ರಸಂಗದ ಮೂಲಕ ದುಃಖ ಸಾರ್ವತ್ರಿಕ ಎಂಬುದನ್ನು ಆತ ನಿರೂಪಿಸಿದ್ದಾನೆ ಎಂದು ರಾಜ್ಯೋತ್ಸವ (rajyotsava) ಪ್ರಶಸ್ತಿ ಪುರಸ್ಕೃತ, ಸಿರಿವಂತೆ ಚಿತ್ರಸಿರಿಯ ಎನ್.ಚಂದ್ರಶೇಖರ್ ಹೇಳಿದರು.
ಜಿಲ್ಲಾಡಳಿತದಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬುದ್ಧ ಜಯಂತಿಯಲ್ಲಿ ಉಪನ್ಯಾಸ ನೀಡಿದ ಅವರು, ಬುದ್ಧನ ಕಾಲದಲ್ಲಿ ಲಿಪಿ ಇರಲಿಲ್ಲ. ಆತ ಕಾಲವಾದ ಒಂದೂವರೆ ಶತಮಾನದ ನಂತರ ಪಾಲಿ ಭಾಷೆಯಲ್ಲಿ ಬುದ್ಧನ ಇತಿಹಾಸವಿದೆ. ಅಲ್ಲಿಯವರೆಗೂ ಬುದ್ಧ ಜನರ ಬಾಯಿಂದ ಬಾಯಿಗೆ, ಜನಪದದ ಮೂಲಕ ಸಾಗಿ ಬಂದಿರುವುದನ್ನು ಗಮನಿಸಬಹುದು ಎಂದರು.
ಇದ್ದದ್ದನ್ನು ಇದ್ದಂತೆಯೇ ಹೇಳಿದ ಏಕೈಕ ವ್ಯಕ್ತಿ ಬುದ್ಧ. ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. ದಾನ ಕೊಡುವುದನ್ನು ರೂಢಿಸಿಕೊಳ್ಳಬೇಕು ಎಂದು ಅಂದೇ ಸಾರಿದವನು ಬುದ್ಧ. ವೈಚಾರಿಕ ಚಿಂತನೆ ಬೆಳೆಸಿಕೊಳ್ಳಬೇಕು. ಅದಕ್ಕಾಗಿ ನಾವು ಅಧ್ಯಯನಶೀಲರಾಗಬೇಕು ಎಂದಿದ್ದ. ನಾವು ನಮ್ಮೊಳಗೆ ಬುದ್ಧನನ್ನು ಇಳಿಸಿಕೊಂಡರೆ ಎಲ್ಲವೂ ಅರ್ಥ ಆಗುತ್ತದೆ ಎಂದು ತಿಳಿಸಿದರು.
ಬುದ್ಧ ಎಂದಿಗೂ ರೂಢಿಗತ ಬದುಕನ್ನು ಕಣ್ಣು ಮುಚ್ಚಿ ನಂಬಲಿಲ್ಲ. ಪ್ರತಿಯೊಂದನ್ನೂ ಆತ ಪ್ರಶ್ನೆ ಮಾಡುತ್ತಿದ್ದ. ಈ ಗುಣವೇ ಬುದ್ಧನನ್ನು ನಮ್ಮವರೆಗೆ ಕರೆತಂದಿದೆ. ಪ್ರಶ್ನೆ ಕೇಳುವ ಗುಣ ಎಲ್ಲರಲ್ಲೂ ಬೆಳೆಯಬೇಕು. ಬುದ್ಧ ಬಾಲ್ಯದಿಂದಲೇ ಹಿಂಸೆಯನ್ನು, ಮನುಷ್ಯ ಮನುಷ್ಯನನ್ನು ಶೋಷಿಸುವುದನ್ನು ವಿರೋಧಿಸುತ್ತಿದ್ದ. ಸಂಸ್ಕೃತಿಯನ್ನು ಉನ್ನತೀಕರಿಸುವ ತುಡಿತ ಅವನಲ್ಲಿತ್ತು ಎಂದು ಹೇಳಿದರು.
ಬುದ್ಧನು ಅಂದಿನ ಕಾಲದ ಸಾಮಾಜಿಕ ತಾರತಮ್ಯಗಳನ್ನು ಬಲವಾಗಿ ವಿರೋಧಿಸುತ್ತಿದ್ದ. ಅಹಿಂಸೆ, ಮೌಢ್ಯ, ಅಸಮಾನತೆ, ತಾರತಮ್ಯ ಹೋಗಲಾಡಿಸುವ ಮಾರ್ಗೋಪಾಯವಾಗಿ ತನ್ನ ಕಾಲ್ನಡಿಗೆಯ ಮೂಲಕ ಎಲ್ಲೆಡೆ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದ ಎಂದರು.
ಬುದ್ಧ ಧರ್ಮಾಂಕುರ ಟ್ರಸ್ಟ್ ಅಧ್ಯಕ್ಷ ಪ್ರೊ. ರಾಚಪ್ಪ ಬುದ್ಧ ವಂದನೆ ನೆರವೇರಿಸಿದರು. ನೀಲಪ್ಪ ಬುದ್ಧ ಗೀತೆ ಪ್ರಸ್ತುತಪಡಿಸಿದರು. ತಹಸೀಲ್ದಾರ್ ಲಿಂಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಮುಂತಾದವರಿದ್ದರು.

ಮಹಾನ್ ಮಾನವತಾವಾದಿ

ಜಗತ್ತಿಗೆ ಅಹಿಂಸೆ, ಕರುಣೆ ಮತ್ತು ಶಾಂತಿಯ ಸಂದೇಶವನ್ನು ಸಾರಿದ ಮಹಾ ಮಾನವತಾವಾದಿ, ಬದುಕಿಗೆ ಜ್ಞಾನವನ್ನು ನೀಡಿದ ದೊಡ್ಡ ಜ್ಞಾನಿ ಬುದ್ಧ. ಜೀವನದಲ್ಲಿ ಪರಿಶುದ್ಧತೆ ಅಳವಡಿಸಿಕೊಳ್ಳಬೇಕು. ಮನುಷ್ಯ ಮನುಷ್ಯನಾಗಿ ಬದುಕುವ, ಇತರರಿಗೆ ಸಹಾಯ ಮಾಡುವಂತಹ ಗುಣ ಹೊಂದಬೇಕೆಂದು ಸಾರಿದವನು ಬುದ್ಧ. ಆತನ ತತ್ವಗಳು ಸರಳವಾಗಿದ್ದು ನಾವೆಲ್ಲರೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net