12ರಂದು ವರದಹಳ್ಳಿಯಲ್ಲಿ ಗಮಕ ಸಮ್ಮೇಳನ | Shridhara ashrama

ಎಂ.ಆರ್.ಲಕ್ಷ್ಮೀನಾರಾಯಣ
ಎಂ.ಆರ್.ಲಕ್ಷ್ಮೀನಾರಾಯಣ
Published on
ಸಾಗರ: ತಾಲೂಕಿನ ವರದಹಳ್ಳಿಯಲ್ಲಿ ಶ್ರೀಧರಾಶ್ರಮದ ಸ್ವಾನಂದಾಮೃತ ವೇದಿಕೆಯಲ್ಲಿ ಸಾಗರ ಪ್ರಾಂತ್ಯ ಪ್ರಥಮ ಗಮಕ ಸಮ್ಮೇಳನ ಏ.12ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಸಮ್ಮೇಳನ ನಡೆಯಲಿದೆ ಎಂದು ಮಲೆನಾಡು ಗಮಕ ಕಲಾ ಟ್ರಸ್ಟ್ ಅಧ್ಯಕ್ಷ ಪ್ರೊ. ಕೆ.ಆರ್.ಕೃಷ್ಣಯ್ಯ ಹೇಳಿದರು.
ಖ್ಯಾತ ವ್ಯಾಖ್ಯಾನಕಾರರು, ರಾಜ್ಯಪ್ರಶಸ್ತಿ ಪುರಸ್ಕೃತ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಎಂ.ಆರ್.ಲಕ್ಷ್ಮೀನಾರಾಯಣ ಅಮಚಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುವರು. ಬೆಳಗ್ಗೆ 10.15ಕ್ಕೆ ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತ ಮತ್ತೂರು-ಹೊಸಳ್ಳಿಯ ರಾಜಾರಾಮಮೂರ್ತಿ ಉದ್ಘಾಟಿಸಲಿದ್ದಾರೆ. ಡಾ. ಎಚ್.ಎಸ್.ಮೋಹನ್, ಎಂ.ಜಿ.ಕೃಷ್ಣಮೂರ್ತಿ, ಪ್ರೊ. ಕೆ.ಆರ್.ಕೃಷ್ಣಯ್ಯ ಉಪಸ್ಥಿತರಿರುವರು ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಗಮಕ ವಾಚನ-ವ್ಯಾಖ್ಯಾನ, ಗಮಕ ವಾಚನ, ನಿರೂಪಣೆ ಇರುತ್ತದೆ. ಮಧ್ಯಾಹ್ನ 2.45ಕ್ಕೆ ಗಮಕ ವಾಚನದ ಗೊತ್ತುಗುರಿ ವಿಷಯ ಕುರಿತು ವಿದುಷಿ ಸೀತಾ ಬಾಪಟ್, ಗಮಕ ವ್ಯಾಖ್ಯಾನದ ಇತಿಮಿತಿ ಕುರಿತು ದೇವೇಂದ್ರ ಬೆಳೆಯೂರು ಉಪನ್ಯಾಸ ನೀಡುವರು. ನಿವೃತ್ತ ಪ್ರಾಚಾರ್ಯ ಡಾ. ಜಿ.ಎಸ್.ಭಟ್ ಅಧ್ಯಕ್ಷತೆ ವಹಿಸುವರು. ಸಂಜೆ 5.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಟಿ.ಬಿ.ಮಂಜುನಾಥ ಶೆಟ್ಟಿ ಮಾತನಾಡುವರು. ಅಶ್ವಿನಿಕುಮಾರ್ ಎಂ.ಜಿ.ಕೃಷ್ಣಮೂರ್ತಿ, ಕೆ.ಆರ್.ಕೃಷ್ಣಯ್ಯ ಉಪಸ್ಥಿತರಿರುವರು. ಸಂಘದ ಸಂಸ್ಥಾಪಕ ಸದಸ್ಯರಾದ ಎಚ್.ಎಂ.ತಿಮ್ಮಪ್ಪ ಕಲಸಿ, ಎಸ್.ಕೆ.ಪ್ರಭಾವತಿ, ಗಾಯತ್ರಿ ನಂಜುಂಡ, ಎನ್.ಶ್ರೀಧರ್ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ಹೇಳಿದರು.
1981ರಲ್ಲಿ ಗಮನ ಕಲಾ ಸಂಘವನ್ನು ಹೊಸಬಾಳೆ ಸೀತಾರಾಮಯ್ಯ, ಭೀಮಾಚಾರ್, ನೀ.ನಾ.ಮಧ್ಯಸ್ಥ, ಶ್ರೀನಿವಾಸ್ ಉಡುಪ ಇನ್ನಿತರರು ಆರಂಭಿಸಿದ್ದರು. ಹೊಸಬಾಳೆ ಸೀತಾರಾಮಯ್ಯ ಅವರು ಸಂಘದ ಅಧ್ಯಕ್ಷರಾಗಿ ಗಮಕವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸಿದವರು. ಅವರ ನಿಧನದ ನಂತರ 2022ರಿಂದ ನಾನು ಅಧ್ಯಕ್ಷನಾದ ಮೇಲೆ ನೂರಾರು ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮ ನಡೆಸಲಾಗಿದೆ. ಗಮಕ ಕಲಾಸಂಘದ ಎಲ್ಲ ಕಾರ್ಯಕ್ರಮಗಳಿಗೆ ಶ್ರೀಧರ ಸೇವಾಶ್ರಮ ಸಹಕಾರ ನೀಡುತ್ತ ಬರುತ್ತಿದೆ.  ಜಿ.ಯೋಗೀಶ್, ಕೆ.ಎಂ.ರವೀಂದ್ರ, ಭಾರತಿ ಸುದರ್ಶನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net