ಖರೀದಿ ಜೋರು: ಹಬ್ಬದ ಹಿನ್ನೆಲೆಯಲ್ಲಿ ಸಾಗರ ಪಟ್ಟಣ ಜನರಿಂದ ಗಿಜಿಗಿಜಿ ಎನ್ನುತ್ತಿದೆ. ಪ್ರಮುಖ ವೃತ್ತಗಳಲ್ಲಿ ಹೂವು, ಹಣ್ಣು, ತರಕಾರಿ ವ್ಯಾಪಾರ ಭರದಿಂದ ನಡೆಯಿತು. ಗಣಪತಿ ಜಾತ್ರೆ ಮಾ.22ರಂದು ನಡೆಯಲಿದ್ದು, ಸಾಂಪ್ರದಾಯಿಕ ವಿಧಿವಿಧಾನಗಳು 19ರಿಂದಲೇ ಆರಂಭವಾಗಲಿವೆ. ಇದರ ಸಿದ್ಧತೆಯೂ ರಥಬೀದಿಯಲ್ಲಿ ನಡೆಯುತ್ತಿದೆ. ಅಂಗಡಿ ಮುಂಗಟ್ಟುಗಳ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಹಬ್ಬಕ್ಕೆ ಬೇವು, ಬೆಲ್ಲ, ಮಾವಿನಸೊಪ್ಪು, ಬಾಳೆಕಂಬ ಖರೀದಿಯಲ್ಲಿ ಜನತೆ ತೊಡಗಿದ್ದಾರೆ.