ಚಿನ್ನಾಭರಣ ಕಳ್ಳತನ ಮಾಡಿದ್ದ ಮಹಿಳೆ ಸೇರಿ ನಾಲ್ವರ ಬಂಧನ | Jewelry theft

ಚಿನ್ನಾಭರಣ ಜಪ್ತಿ ಮಾಡಿದ ನಗರ ಠಾಣೆ ಪೊಲೀಸರು.
ಚಿನ್ನಾಭರಣ ಜಪ್ತಿ ಮಾಡಿದ ನಗರ ಠಾಣೆ ಪೊಲೀಸರು.
Published on

ಪ್ರಮುಖ ಮುಖ್ಯಾಂಶಗಳು

  • ಉತ್ತರ ಕನ್ನಡ ಜಿಲ್ಲೆಯ ಮಹಿಳೆ ಸೇರಿ ನಾಲ್ವರನ್ನು ಪೊಲೀಸರು ಬಂಧನ
  • 7.90 ಲಕ್ಷ ರೂ. ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿದ ನಗರ ಠಾಣೆ ಪೊಲೀಸರು
  • ಹೊಸನಗರ ತಾಲೂಕಿನ ಗೌರಿಕೆರೆಯ ರಾಜೇಂದ್ರಶೆಟ್ಟಿ ಅವರ ಮನೆಯಲ್ಲಿ ಕಳ್ಳತನ
ಶಿವಮೊಗ್ಗ: ಹೊಸನಗರ ತಾಲೂಕಿನ ನಿಟ್ಟೂರು ಗೌರಿಕೆರೆ(Gouri kere)ಯ ಮನೆಯಲ್ಲಿ ಚಿನ್ನಾಭರಣ ಕಳ್ಳತನ(Jewelry theft) ಮಾಡಿದ್ದ ಉತ್ತರ ಕನ್ನಡ ಜಿಲ್ಲೆಯ ಮಹಿಳೆ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದು, 7.90 ಲಕ್ಷ ರೂ. ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮಹಮ್ಮದ್ ಇಮ್ರಾನ್ ಇಕ್ಕೇರಿ (25), ಕುಳಿಕೊಂಡದ ಮಹಮ್ಮದ್ ಅಖೀಲ್(24), ಗುಳಮಿ ಕೆಕೆ ಫಾರಂನ ಅಮೀರ್ ಹಸನ್ ಬ್ಯಾರಿ(29) ಮತ್ತು ಚೌಥನಿ ಬ್ರಿಡ್ಸ್‌ನ ಬೇಬಿ ಹಾಜಿರ (55) ಬಂಧಿತರು. ಅವರಿಂದ 3.87 ಲಕ್ಷ ರೂ. ಮೌಲ್ಯದ 30 ಗ್ರಾಂನ ಬಂಗಾರದ ನೆಕ್ಲೇಸ್(Gold necklace), 93 ಸಾವಿರ ರೂ. ಮೌಲ್ಯದ 06 ಗ್ರಾಂ ಬಂಗಾರದ ಬ್ರಾಸ್‌ಲೇಟ್, 5 ಸಾವಿರ ರೂ. ಮೌಲ್ಯದ 50 ಗ್ರಾಂ ಬೆಳ್ಳಿಯ ವಸ್ತುಗಳು, 5 ಸಾವಿರ ರೂ. ಮೌಲ್ಯದ ಮೊಬೈಲ್ ಪೋನ್ ಹಾಗೂ 3 ಲಕ್ಷ ರೂ. ಮೌಲ್ಯದ ಟಾಟಾ ಇಟಿಯೋಸ್ ಕಾರನ್ನು ಜಪ್ತಿ ಮಾಡಿದ್ದಾರೆ.
ಆರೋಪಿಗಳು 2025ರ ಡಿ.27ರಂದು ಹೊಸನಗರ ತಾಲೂಕಿನ ನಿಟ್ಟೂರು ಗೌರಿಕೆರೆಯ ರಾಜೇಂದ್ರಶೆಟ್ಟಿ ಎಂಬುವರ ಮನೆಯಲ್ಲಿ ಕಳ್ಳತನವಾಗಿತ್ತು. ಮುಂಬಾಗಿಲಿನ ಬೀಗ ಮುರಿದು ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಿದ್ದರು. ಈ ಬಗ್ಗೆ ನಗರ ಪೊಲೀಸ್ ಠಾಣೆ(Nagara police station)ಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್‌ಪಿ(Sp) ಬಿ.ನಿಖಿಲ್ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಡಿವೈಎಸ್‌ಪಿ(Dysp) ಅರವಿಂದ ಎನ್ ಕಲಗುಜ್ಜಿ, ಹೊಸನಗರ ಸಿಪಿಐ(Cpi) ಎಂ.ಐ. ಗೌಡಪ್ಪಗೌಡ್ರ, ಮೇಲ್ವಿಚಾರಣೆಯಲ್ಲಿ ನಗರ ಠಾಣೆ ಪಿಎಸ್‌ಐ ಶಿವಾನಂದ ಕೋಳಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಟಿ.ಕುಮಾರ್, ಶೇಕ್ ಅಮೀರ್ ಜಾನ್, ಕಿರಣ್‌ಕುಮಾರ್, ಡಿ.ಸಿ.ಗಿರಿಪ್ರಸಾದ್, ಡಿ.ವಿಶ್ವನಾಥ್, ಪ್ರವೀಣ್‌ಕುಮಾರ್, ಶಿವಕುಮಾರ ನಾಯ್ಕ, ರವಿಚಂದ್ರ, ಸಚಿನ್, ಮಂಜುನಾಥ, ಜಿ.ಎಚ್.ಲಕ್ಷ್ಮಣ, ಕೆ.ಆರ್.ಅಕ್ಷಯ, ಎನ್.ಶಿಲ್ಪಾ, ಎಸ್.ಅನುಷಾ, ಚಾಲಕರಾದ ಮಧುಸೂಧನ, ಎನ್.ಶಶಿಧರ, ಗುರುರಾಜ್ ,ಇಂದ್ರೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net