ಕಲ್ಚರಲ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಶೀಘ್ರ

ಸಾಗರದಲ್ಲಿ ಸಹೃದಯ ಬಳಗದಿಂದ ಆಯೋಜಿಸಿದ್ದ 25ನೇ ವರ್ಷದ ರಜತ ಸಾಗರೋತ್ಸವವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಿ.ಟಾಕಪ್ಪ, ಅನಿತಾಕುಮಾರಿ, ಜಿ.ನಾಗೇಶ್ ಇತರರಿದ್ದರು.
ಸಾಗರದಲ್ಲಿ ಸಹೃದಯ ಬಳಗದಿಂದ ಆಯೋಜಿಸಿದ್ದ 25ನೇ ವರ್ಷದ ರಜತ ಸಾಗರೋತ್ಸವವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಿ.ಟಾಕಪ್ಪ, ಅನಿತಾಕುಮಾರಿ, ಜಿ.ನಾಗೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆ
  • ಸಹೃದಯ ಬಳಗದಿಂದ ಸಾಗರ ರಜತೋತ್ಸವ
ಸಾಗರ: ಸಾಹಿತ್ಯ, ಸಾಂಸ್ಕೃತಿಕವಾಗಿ ಹೆಚ್ಚು ಕ್ರಿಯಾಶೀಲವಾಗಿರುವ ತಾಲೂಕು ಸಾಗರ. ಇಲ್ಲಿನ ಪ್ರತಿಭಾನ್ವಿತರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ನಗರಸಭೆ ರಂಗಮಂದಿರದಲ್ಲಿ ಸಹೃದಯ ಬಳಗ ಆಯೋಜಿಸಿದ್ದ ರಜತ ಸಾಗರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಧಕರನ್ನು ಸನ್ಮಾನಿಸುವುದರಿಂದ ಇತರರಿಗೂ ಪ್ರೇರಣೆಯಾಗುತ್ತದೆ ಎಂದು ತಿಳಿಸಿದರು.
4.80 ಕೋಟಿ ರೂ. ವೆಚ್ಚದಲ್ಲಿ ಟ್ಯಾಗೋರ್ ಕಲ್ಚರಲ್ ಕಾಂಪ್ಲೆಕ್ಸ್ ನಿರ್ಮಾಣದ ಶಂಕುಸ್ಥಾಪನೆ ಶೀಘ್ರ ನಡೆಯಲಿದೆ. 12 ಕೋಟಿ ರೂ. ವೆಚ್ಚದ ರಂಗಮಂದಿರ ನಿರ್ಮಿಸಲಾಗುತ್ತಿದೆ. ಇದರಿಂದ ವಿವಿಧ ಕಾರ್ಯಕ್ರಮ ನಡೆಸಲು ಅನುಕೂಲವಾಗುತ್ತದೆ ಎಂದರು.
ಸಾಧಕರಿಗೆ ಪ್ರಶಸ್ತಿ: ಗೋಪಾಲಕೃಷ್ಣ ಬೇಳೂರು(ರಾಜಕಾರಣಿ), ಡಾ. ಬಿ.ಎಲ್.ನಾಗರಾಜ್ ಮಂಗಳೂರು(ಸಾಹಿತಿ), ವೇಣುಗೋಪಾಲ್ ಗುರೂಜಿ ಶಿವಮೊಗ್ಗ(ಗುರುಗಳು), ಡಾ. ಬಿ.ಎಲ್.ಸುರೇಶ್ ಬೆಂಗಳೂರು(ಬಹುಮುಖ ಪ್ರತಿಭೆ), ಡಾ. ಜಿ.ಎಂ.ಮಂಜುನಾಥ್ ದಾವಣಗೆರೆ(ಕೃಷಿಕ), ಡಾ. ಅಮರೇಶ್ ಯತಗಲ್ ರಾಯಚೂರು(ಇತಿಹಾಸ ತಜ್ಞ), ಪ್ರಸನ್ನಕುಮಾರ್ ಶಿವಮೊಗ್ಗ (ಸಹಕಾರಿ), ವಿದ್ವಾನ್ ಎಂ.ಗೋಪಾಲ್(ನೃತ್ಯ ಕಲಾವಿದ) ಅವರಿಗೆ ರಾಷ್ಟ್ರೀಯ ಸಹೃದಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಟಾಕಪ್ಪ, ಆಪ್ಸ್‌ಕೋಸ್ ಮಾಜಿ ಅಧ್ಯಕ್ಷ ಸೂರ್ಯನಾರಾಯಣ ರಾವ್, ಸಹೃದಯ ಬಳಗದ ಅಧ್ಯಕ್ಷ ಜಿ.ನಾಗೇಶ್, ಪ್ರಮುಖರಾದ ಅನಿತಾಕುಮಾರಿ, ಮಧುಮಾಲತಿ, ಶರಾವತಿ ಸಿ. ರಾವ್, ಎನ್.ಸಂತೋಷಕುಮಾರ್, ಚೇತನರಾಜ್ ಕಣ್ಣೂರು, ಆಶಾ ಹೆಗಡೆ, ಲೋಕೇಶ್ ಕುಮಾರ್, ಸಂತೋಷ್ ಶೇಟ್, ವಿ.ಟಿ.ಸ್ವಾಮಿ ಇತರರಿದ್ದರು.
ಕೆಳದಿ ರಾಜಗುರು ಹಿರೇಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾರದಾಂಬಾ ಕಲಾಕೇಂದ್ರದಿಂದ ಭರತನಾಟ್ಯ, ದೈವಜ್ಞ ಚಿಣ್ಣರ ಬಳಗದಿಂದ ಚಂಡೆವಾದನ, ಶಿಯಾನ್ ಪಂಚಪ್ಪ ನೇತೃತ್ವದಲ್ಲಿ ಕರಾಟೆ ಪ್ರದರ್ಶನ, ಮನು ಹಂದಾಡಿ ಅವರಿಂದ ನಗೆಹಬ್ಬ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net