8ರಂದು ಮಾಜಿ ಸಿಎಂ ಬಿಎಸ್‌ವೈ ಚಿತ್ರದುರ್ಗಕ್ಕೆ | BSY fan festival

ಅಭಿಮಾನೋತ್ಸವ ಸಮಿತಿ ಸಂಚಾಲಕ ಬಿ.ವೈ.ರಾಘವೇಂದ್ರ
ಅಭಿಮಾನೋತ್ಸವ ಸಮಿತಿ ಸಂಚಾಲಕ ಬಿ.ವೈ.ರಾಘವೇಂದ್ರ
Published on

ಪ್ರಮುಖ ಮುಖ್ಯಾಂಶಗಳು

  • 8ರಂದು ಸಂಜೆ ಯಡಿಯೂರಪ್ಪ ಅವರ ಪುರ ಪ್ರವೇಶ
  • 9ರಂದು ಮಧ್ಯಾಹ್ನ 12.30ಕ್ಕೆ ಸಮಾವೇಶ ಆರಂಭ
  • ಅಭಿಮಾನೋತ್ಸವ ಸಮಿತಿ ಸಂಚಾಲಕ ಬಿ.ವೈ.ರಾಘವೇಂದ್ರ ಹೇಳಿಕೆ
ಶಿವಮೊಗ್ಗ: ಚಿತ್ರದುರ್ಗದಲ್ಲಿ ಮೇ 8ರಂದು ಸಂಜೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(B.S.Yediyurappa) ಅವರ ಪುರ ಪ್ರವೇಶ ಆಗಲಿದೆ ಎಂದು ಲೋಕಸಭಾ ಸದಸ್ಯ, ಅಭಿಮಾನೋತ್ಸವ ಸಮಿತಿ ಸಂಚಾಲಕ ಬಿ.ವೈ.ರಾಘವೇಂದ್ರ ಹೇಳಿದರು. 
9ರಂದು ಮಧ್ಯಾಹ್ನ 12.30ಕ್ಕೆ ಸಮಾವೇಶ ಆರಂಭವಾಗಲಿದೆ. ಮಠಾಧೀಶರು, ಜನಪ್ರತಿನಿಧಿಗಳು ಮಾತನಾಡುವರು. ಮಧ್ಯಾಹ್ನ 3.30ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಇಲ್ಲಿಂದಲೇ ಹೆಲಿಕಾಪ್ಟರ್(Helicopter) ಮೂಲಕ ಸಮಾವೇಶದ ಪಕ್ಕದಲ್ಲೇ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ಆಗಮಿಸುವರು. ಸಂಜೆ 4ಕ್ಕೆ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಜೆ 6ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಪ್ರಯಾಣ ಮುಂದುವರಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 
ಚಿತ್ರದುರ್ಗ ನಾರಿಶಕ್ತಿಗೆ ವಿಶೇಷ ಕೊಡುಗೆ ನೀಡಿದ ಜಿಲ್ಲೆ. ಒನಕೆ ಓಬವ್ವ ನೆಲೆಸಿದ ನಾಡು. ಹಾಗಾಗಿ ನಾರಿಶಕ್ತಿಗೆ ಮತ್ತಷ್ಟು ಶಕ್ತಿ ತುಂಬುವ ನಿಟ್ಟಿನಲ್ಲಿ ಬಿಎಸ್‌ವೈ ಅಭಿಮಾನೋತ್ಸವ(BSY fan festival)ವನ್ನು ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲೆಯಿಂದಲೂ ದೊಡ್ಡ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವರು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಂದಲೂ ಅವರ ಅಭಿಮಾನಿಗಳು ಬರುತ್ತಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಸಾವಿರಾರು ಜನರು ಸಮಾವೇಶಕ್ಕೆ ಬರುತ್ತಿದ್ದಾರೆ. 10 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಪೆಂಡಾಲ್‌ನಲ್ಲಿ 4ಲಕ್ಷ ಆಸನಗಳನ್ನು ಹಾಕಲಾಗಿದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net