ಯುವ ಪೀಳಿಗೆಗೆ ಜಾಗೃತಿ ಮೂಡಿಸಲು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ(Open house program) ಆಯೋಜಿಸಲಾಗಿತ್ತು. ಆದಿಚುಂಚನಗಿರಿ ಶಾಲೆ ವಿದ್ಯಾರ್ಥಿಗಳು ಠಾಣೆಗೆ ಭೇಟಿ ನೀಡಿ ಕಾನೂನು ಪಾಲನೆ ಹಾಗೂ ನಾಗರಿಕ ಜವಾಬ್ದಾರಿ ಕುರಿತು ಮಾಹಿತಿ ಪಡೆದರು. ಜಿಲ್ಲಾ ಶಸ್ತ್ರಾಗಾರದಿಂದ ತರಲಾಗಿದ್ದ ರೈಫಲ್ಸ್(Rifles), ಪಿಸ್ತೂಲ್(pistols) ಸೇರಿ ವಿವಿಧ ಆಯುಧಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. ದೊಡ್ಡಪೇಟೆ ಠಾಣೆಯ ಕೆಲಸದ ವಾತಾವರಣ, ಸಿಬ್ಬಂದಿ ಕಾರ್ಯವೈಖರಿ ಮತ್ತು ದೈನಂದಿನ ಚಟುವಟಿಕೆಗಳನ್ನು ವೀಕ್ಷಿಸಿದರು. ಮಾದಕವಸ್ತುಗಳಿಂದ ದೂರವಿರಲು ‘ಬೇಡ ಬ್ರೋ ಅಭಿಯಾನ(Beda Bro campaign)’, ನಾಗರಿಕ ನಿಯಮಗಳು ಮತ್ತು ರಸ್ತೆ ಸುರಕ್ಷತೆ ಬಗ್ಗೆ ಎಸ್‌ಪಿ ಬಿ.ನಿಖಿಲ್ ಮಾಹಿತಿ ನೀಡಿದರು. ಡಿವೈಎಸ್ಪಿ ಸಂಜೀವ್‌ಕುಮಾರ್, ದೊಡ್ಡಪೇಟೆ ಇನ್‌ಸ್ಪೆಕ್ಟರ್ ಸತ್ಯನಾರಾಯಣ್ ಇತರರಿದ್ದರು.