ಗ್ರಾಮೀಣ ಜನತೆಗೆ ಪ್ರಕೃತಿಯೇ ದೇವರು

ಸಾಗರ ತಾಲೂಕಿನ ಹಿರೇನೆಲ್ಲೂರಿನ ದೊಡ್ಡಕೆರೆಗೆ ಗ್ರಾಮ ಸುಧಾರಣಾ ಸಮಿತಿಯಿಂದ ಬಾಗಿನ ಸಲ್ಲಿಸಲಾಯಿತು. ಉಮೇಶ್​, ರಾಮಚಂದ್ರ ಮೇಸ್ತಿ, ಸತೀಶ್​ ಅಂಗಡಿ,  ಗುತ್ತಿ ಸಂತೋಷ್​, ಲೋಕೇಶ್​, ಶ್ರೀಧರ್​ ಇತರರಿದ್ದರು.
ಸಾಗರ ತಾಲೂಕಿನ ಹಿರೇನೆಲ್ಲೂರಿನ ದೊಡ್ಡಕೆರೆಗೆ ಗ್ರಾಮ ಸುಧಾರಣಾ ಸಮಿತಿಯಿಂದ ಬಾಗಿನ ಸಲ್ಲಿಸಲಾಯಿತು. ಉಮೇಶ್​, ರಾಮಚಂದ್ರ ಮೇಸ್ತಿ, ಸತೀಶ್​ ಅಂಗಡಿ, ಗುತ್ತಿ ಸಂತೋಷ್​, ಲೋಕೇಶ್​, ಶ್ರೀಧರ್​ ಇತರರಿದ್ದರು.
Published on
ಸಾಗರ: ಗ್ರಾಮೀಣ ಭಾಗದ ಜನರಿಗೆ ಪ್ರಕೃತಿಯೇ ದೇವರು. ಕೆರೆ, ಮರ, ಕಾಡು, ನದಿ, ಪರಿಸರದಲ್ಲಿ ನಾವು ದೇವರನ್ನು ಕಾಣುತ್ತೇವೆ ಎಂದು ಹಿರೇನೆಲ್ಲೂರು ಗ್ರಾಮಾಭಿವೃದ್ಧಿ ಸಮಿತಿ ಅಧ್ಯ ಉಮೇಶ್​ ಹೇಳಿದರು.
ಸಾಗರ ತಾಲೂಕಿನ ಹಿರೇನೆಲ್ಲೂರಿನಲ್ಲಿ ದೊಡ್ಡಕೆರೆ ತುಂಬಿದ ಹಿನ್ನೆಲೆಯಲ್ಲಿ ಗ್ರಾಮ ಸುಧಾರಣಾ ಸಮಿತಿಯಿಂದ ಬಾಗಿನ ಸಲ್ಲಿಸಿ ಮಾತನಾಡಿದರು.
ಹಿರೇನೆಲ್ಲೂರಿನ ದೊಡ್ಡಕೆರೆ ಪ್ರತಿವರ್ಷ ತುಂಬಿ ಈ ಭಾಗದ ಕೃಷಿ ಚಟುವಟಿಕೆಗಳಿಗೆ ನೆರವಾಗುತ್ತಿದೆ. ಈ ವರ್ಷ ಮಳೆ ಕೊರತೆಯಿಂದಾಗಿ ಕೆರೆತುಂಬಲು ವಿಳಂಬವಾಗಿದೆ. ಕೆರೆಯ ಸುತ್ತಮುತ್ತ ದೇವಸ್ಥಾನಗಳಿದ್ದು, ಇಲ್ಲಿ ಹರಕೆ ಕಟ್ಟಿಕೊಳ್ಳುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ ಎನ್ನುವ ನಂಬಿಕೆ ಇದೆ. ಸಾವಿರಾರು ಜನರು ಇಲ್ಲಿಗೆ ಆಗಮಿಸಿ ಹರಕೆ ಕಟ್ಟಿಕೊಂಡು ಅದು ಈಡೇರಿದಾಗ ಮತ್ತೆ ಆಗಮಿಸಿ ಹರಕೆ ತೀರಿಸುತ್ತಾರೆ ಎಂದರು.
ಸಾಗರ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ದೇವೇಂದ್ರಪ್ಪ ಯಲಕುಂದ್ಲಿ ಮಾತನಾಡಿ, ಹಿಂದಿನವರು ಆಚರಿಸಿಕೊಂಡು ಬಂದಿರುವ ಪದ್ಧತಿಗಳಿಗೆ ಚ್ಯುತಿ ಬಾರದಂತೆ ನಾವು ಮುಂದುವರಿಸಿದ್ದೇವೆ. ದೊಡ್ಡಕೆರೆ ಭರ್ತಿಯಾಗಿ ಕೋಡಿ ಬಿದ್ದಾಗ ಬಾಗಿನ ನೀಡುವುದು ನಮ್ಮ ಸಂಪ್ರದಾಯ ಎಂದು ಹೇಳಿದರು.
ಮುಖಂಡರಾದ ರಾಮಚಂದ್ರ ಮೇಸ್ತಿ, ಸತೀಶ್​ ಅಂಗಡಿ, ಗುತ್ತಿ ಸಂತೋಷ್​, ಲೋಕೇಶ್​ ನರ್ಗುಡಿ, ಶ್ರೀಧರ್​, ಚಂದ್ರು, ನಾರಾಯಣಪ್ಪ, ದಾನಶೇಖರ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net