ಮನುಷ್ಯ ಮಾತ್ರವಲ್ಲದೆ ಭೂಮಿ ಮೇಲಿನ ಪ್ರತಿ ಜೀವಿಗೂ ಆರೋಗ್ಯದಿಂದ ಬದುಕಲು ಪೂರಕವಾದ ಆಹಾರ, ಔಷಧವನ್ನು ಪ್ರಕೃತಿ ಪೂರೈಸುತ್ತದೆ. ವಾಣಿಜ್ಯ ಮನೋಭಾವದಿಂದ ಹೆಚ್ಚು ಉತ್ಪಾದನೆಯ ಹಪಾಹಪಿಯಲ್ಲಿ ತರಕಾರಿ, ಹಾಲು, ಹಣ್ಣು, ಔಷಧಕ್ಕೆ ಬಳಸುವ ಶುಂಠಿಯೂ ಸೇರಿ ಎಲ್ಲವನ್ನೂ ವಿಷಮಯ ಮಾಡಿದ್ದೇವೆ. ಕ್ಯಾನ್ಸರ್ನಂಥ ಗುಣಪಡಿಸಲಾಗದ ಕಾಯಿಲೆಗಳಿಗೆ ತುತ್ತಾಗಿ ಮನುಷ್ಯ ಇಂದು ವಿಷ ವರ್ತುಲದಲ್ಲಿ ಸಿಲುಕಿ ತೊಳಲಾಡುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.