ಶಿವಶರಣರ ಹಿತನುಡಿ ಪಾಲಿಸಿ

ಭದ್ರಾವತಿಯಲ್ಲಿ ಏರ್ಪಡಿಸಿದ್ದ ದತ್ತಿ ಕಾರ್ಯಕ್ರಮವನ್ನು ಎಚ್.ಎನ್.ಮಹಾರುದ್ರ ಉದ್ಘಾಟಿಸಿದರು. ಕತ್ತಲಗೆರೆ ತಿಮ್ಮಪ್ಪ, ಗಿರಿಜಾ ಶಂಕರಮೂರ್ತಿ, ಮಲ್ಲಿಕಾಂಬ ಇತರರಿದ್ದರು.
ಭದ್ರಾವತಿಯಲ್ಲಿ ಏರ್ಪಡಿಸಿದ್ದ ದತ್ತಿ ಕಾರ್ಯಕ್ರಮವನ್ನು ಎಚ್.ಎನ್.ಮಹಾರುದ್ರ ಉದ್ಘಾಟಿಸಿದರು. ಕತ್ತಲಗೆರೆ ತಿಮ್ಮಪ್ಪ, ಗಿರಿಜಾ ಶಂಕರಮೂರ್ತಿ, ಮಲ್ಲಿಕಾಂಬ ಇತರರಿದ್ದರು.
Published on
ಭದ್ರಾವತಿ: ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಬಸನಗೌಡ ಮಾಳಗಿ ಹೇಳಿದರು.
ನಗರದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಹಳೇನಗರದ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ದತ್ತಿ ದಾನಿ ಕೆ.ಜಿ.ಶಂಕರಮೂರ್ತಿ ಅವರ ಶರಣೆ ಸುಶೀಲಮ್ಮ ಗುರುಸಿದ್ದಪ್ಪ ದತ್ತಿ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯಕ್ಕೆ ಅಕ್ಕಮಹಾದೇವಿ ಕೊಡುಗೆ ಕುರಿತು ಉಪನ್ಯಾಸ ನೀಡಿದರು.
ಜೀವನದಲ್ಲಿ ಎದುರಾಗುವ ಎಲ್ಲ ಸನ್ನಿವೇಶಗಳ ಕುರಿತಾಗಿ ಅಕ್ಕಮಹಾದೇವಿ ವಚನಗಳಲ್ಲಿ ಉಲ್ಲೇಖಿಸಿದ್ದಾರೆ. ಒಳ್ಳೆಯ ದಾರಿಯಲ್ಲಿ ಸಾಗಿದಾಗ ಕಷ್ಟಗಳು ಹೆಚ್ಚು. ಎಂತಹ ಕಷ್ಟದ ಪರಿಸ್ಥಿತಿ ಬಂದರೂ ಲೆಕ್ಕಿಸದೆ ಶರಣರ ಹಿತನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು ಎಂದು ತಿಳಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್.ಮಹಾರುದ್ರ, ಕತ್ತಲಗೆರೆ ತಿಮ್ಮಪ್ಪ, ಗಿರಿಜಾ ಶಂಕರಮೂರ್ತಿ, ಮಲ್ಲಿಕಾಂಬ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net