ಕಾರ್ಗಲ್: ಮೀನುಗಾರಿಕೆ ಇಲಾಖೆಯಿಂದ ತಳಕಳಲೆ ಜಲಾಶಯದ ಹಿನ್ನೀರಿಗೆ 12 ಲಕ್ಷ ಹಾಗೂ ಶಿರೂರು ಕೆರೆಗೆ 2 ಲಕ್ಷ ಮೀನು ಮರಿಗಳನ್ನು ಬಿತ್ತನೆ ಮಾಡಲಾಯಿತು.
ಜೋಗ-ಕಾರ್ಗಲ್ ಪಪಂ ಮುಖ್ಯಾಧಿಕಾರಿ ಎಂ.ಕೆ.ಸುರೇಶ್ ಚಾಲನೆ ನೀಡಿದರು. ಗೌರಿ, ಕಾಟ್ಲಾ ಮತ್ತು ರೋಹು ಜಾತಿ ಮೀನುಗಳನ್ನು ಬಿತ್ತನೆ ಮಾಡಲಾಗಿದೆ. 60 ದಿನಗಳ ಬಲಿತ ಬಿತ್ತನೆ ಮಾಡಿದ ಮೀನುಮರಿಗಳು ಆಗಿವೆ ಎಂದು ಮೀನುಗಾರಿಕೆ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ತಿಮ್ಮಪ್ಪ ತಿಳಿಸಿದರು.
ಆಶ್ರಯ ಸಮಿತಿ ಸದಸ್ಯ ಎಚ್.ಎಸ್.ಸಾದಿಕ್, ಪಪಂ ನಾಮನಿರ್ದೇಶಿತ ಸದಸ್ಯ ಶ್ರೀಧರ್ ಲಿಂಗನಮಕ್ಕಿ, ಮೀನುಗಾರಿಕಾ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಸತೀಶ್, ತಾಲೂಕು ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಹಂಜ ಹಾಗೂ ಸ್ಥಳೀಯ ಮೀನುಗಾರರು ಹಾಜರಿದ್ದರು.