ಪುಸ್ತಕ ಕಾಗದ ತುಣುಕಲ್ಲ ಜ್ಞಾನ ನೀಡುವ ಕಿಟಕಿಗಳು ಎಂದು ರಾಷ್ಟ್ರಕವಿ ಕುವೆಂಪು ಹೇಳಿದ್ದಾರೆ. ಪುಸ್ತಕಗಳನ್ನು ಪ್ರೀತಿಸುವವರು ಎಂದೂ ಒಂಟಿಯಲ್ಲ. ಪುಸ್ತಕಗಳು ನಮ್ಮ ಒಳಗಿನ ಕಣ್ಣನ್ನು ತೆರೆಸಿ ಸನ್ಮಾರ್ಗಗಳಿಗೆ ಕೊಂಡೊಯ್ಯುತ್ತದೆ ಎಂದು ಸಿರಿವಂತೆ ಸರ್ಕಾರಿ ಪ್ರೌಢಶಾಲೆ 8ನೇ ತರಗತಿ ವಿದ್ಯಾರ್ಥಿನಿ ಕೆ.ಸಾಹಿತ್ಯಾ ಹೇಳಿದರು.
ಸಾಗರ ನಗರಸಭೆ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸತಿಕ ವೇದಿಕೆಯಿಂದ ಆಯೋಜಿಸಿದ್ದ ತಾಲೂಕು 14ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಓದಿ ನಮ್ಮ ಸಂಸತಿ ಉಳಿಸಿ, ಬೆಳೆಸಬೇಕು. ಪುಸ್ತಕ ಸಂಸತಿ ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವ ಮಹತ್ತರ ಟ್ಟದಲ್ಲಿ ನಾವಿದ್ದೇವೆ. ಮಕ್ಕಳ ಸಾಹಿತ್ಯ ಸಮ್ಮೇಳನಗಳು ಮಕ್ಕಳ ಸಾಹಿತ್ಯದ ಹಸಿವು ನೀಗಿಸಬೇಕು. ಹೊಸಹೊಸ ಪ್ರತಿಭೆಗಳು ಬರೆಯಲು ಮುಂದೆ ಬರಬೇಕು. ಇತರ ಎಲ್ಲ ಭಾಷೆಗಳನ್ನು ಗೌರವಿಸುವ ಜತೆಗೆ ಕನ್ನಡ ಭಾಷೆಯನ್ನು ಹೃದಯಾಳದಿಂದ ಪ್ರೀತಿಸಿ, ಹೆಮ್ಮರವಾಗಿ ಬೆಳೆಸಬೇಕು ಎಂದರು.
ಇದೇ ವೇಳೆ ಸಾಹಿತಿ ವಿ.ಗಣೇಶ್ ಬರೆದ ಮಕ್ಕಳಿಗಾಗಿ ರಾಮಾಯಣ, ಮಕ್ಕಳಿಗಾಗಿ ಮಹಾಭಾರತ ಕೃತಿಯನ್ನು ೇತ್ರ ಶಿಣಾಧಿಕಾರಿ ಸದಾನಂದ ಸ್ವಾಮಿ ಬಿಡುಗಡೆ ಮಾಡಿದರು.
ಬಿ.ಬಿಂದು, ಸತ್ಯನಾರಾಯಣ ಸಿರಿವಂತೆ, ಲ$್ಮಣ್ ಆರ್. ನಾಯ್ಕ್, ಓಂಕಾರಪ್ಪ, ಭೂಕೇಶ್ವರಪ್ಪ, ತಾಲೂಕು ಕಸಾ-ಪ ಅಧ್ಯ ವಿ.ಟಿ.ಸ್ವಾಮಿ, ಗುಡ್ಡೆಮನೆ ನಾಗರಾಜ್, ಕವಿರಾಜ್, ದಿಯಾ, ಕನ್ನಡ ಸಾಹಿತ್ಯ ಸಾಂಸತಿಕ ವೇದಿಕೆಯ ತಾಲೂಕು ಅಧ್ಯ ಸದಾನಂದ ಶರ್ಮ, ಗಜಾನನ ಭಟ್ ರೇವಣಕಟ್ಟ, ಶ್ರಾವ್ಯಾ ಇತರರಿದ್ದರು.
ಮಕ್ಕಳ ಸಾಹಿತ್ಯ ಸಮ್ಮೇಳನ ಮೂಲಕ ಹೊಸ ಪ್ರತಿಭೆಗಳನ್ನು ಗುರುತಿಸಿ ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಆದ-ರೆ ಸಾಹಿತ್ಯದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಪಠ್ಯದಲ್ಲಿ ಕವನ, ಕಥೆ, ಪ್ರಬಂಧದಂತಹ ಪ್ರಕಾರಗಳಿದ್ದರೂ ನಮ್ಮ ಸಾಹಿತ್ಯದ ಆಳ ಅವರಿಗೆ ಅರ್ಥವಾಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಸಂಸತಿ ವಿನಿಮಯದ ಮಹತ್ವ ತಿಳಿಸಬೇ-ಕಿ-ದೆ.
> ಡಿ.ಮಂಜುನಾಥ್. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯ
ಕುಟುಂಬಸ್ಥರೆಲ್ಲ ಸೇರಿ ಸಂಭ್ರಮಿಸುತ್ತಿದ್ದ ಆಚರಣೆಗಳೆಲ್ಲ ಇದೀಗ ಮೋಜು&ಮಸ್ತಿಗೆ ಸೀಮಿತವಾಗಿದೆ. ಸಂಸತಿ, ಸಂಸ್ಕಾರದಿಂದ ದೂರ ಸರಿಯುತ್ತಿರುವುದು ಅಪಾಯಕಾರಿ ಸಂಗತಿ. ಹಳ್ಳಿಗಳಲ್ಲಿನ ಮನೆಗಳು ವೃದ್ಧಾಶ್ರಮವಾಗುತ್ತಿದೆ. ದುಡಿಮೆ ಆಶ್ರಯಿಸಿ ಪಟ್ಟಣ ಸೇರಿರುವ ಯುವ-ಜ-ನ-ತೆ ಮತ್ತು ಹಿರಿಯರೊಂದಿಗಿನ ಸಂಬಂಧಗಳು ಶಿಥಿಲವಾಗುತ್ತಿದೆ.
> ಲ$್ಮ ಅಟ್ಟೆ, ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯೆ
ಸಾಗರವನ್ನು ಜಿಲ್ಲೆಯಾಗಿಸಿ
ಪ್ರಸ್ತುತ ಸಾಮಾಜಿಕ ಜಾಲತಾಣ ದೊಡ್ಡ ಶಾಪವಾಗಿದೆ. ರೀಲ್ಸ್ ಹಾವಳಿಯಲ್ಲಿ ಅನುಭವ ಕಳೆದುಕೊಳ್ಳುವ ಅಪಾಯವಿದೆ. ಅಜ್ಜಿಯ ಸುತ್ತ ಕುಳಿತು ಕಥೆ ಕೇಳುತ್ತಿದ್ದ ಮೊಮ್ಮಕ್ಕಳ ಕೈಯಲ್ಲೀಗ ಬೆಲೆಬಾಳುವ ಮೊಬೈಲ್ ರಾರಾಜಿಸುತ್ತಿದೆ. ಶಿಣ ದುಬಾರಿಯಾಗುವ ಜತೆಗೆ ಬದುಕಿನ ಶಿಣ ಕೊಡುವುದು ವಿರಳವಾಗಿದೆ. ಇದೆಲ್ಲದರ ನಡುವೆ ಅನೇಕ ವೈಶಿಷ್ಟಗಳನ್ನು ಹೊಂದಿರುವ ಸಾಗರವನ್ನು ಜಿಲ್ಲೆಯಾಗಿಸಬೇಕು ಎನ್ನುವ ಕೂಗು ಕೇಳಿಬರುತ್ತಿದೆ. ಇದನ್ನು ಸರ್ಕಾರ ಅನುಷ್ಠಾನಗೊಳಿಸಬೇಕು ಎಂದು ಲ$್ಮ ಅಟ್ಟೆ ಒತ್ತಾಯಿಸಿದರು.