ಯೋಗ್ಯ ಗುರುಗಳು ದೊರೆಯುವುದು ಸುದೈವ

ಸೊರಬ: ಮನುಷ್ಯನಿಗೆ ಯೋಗ್ಯ ಗುರು ಸಿಕ್ಕರೆ ಜೀವನ ಸಾರ್ಥಕ ಆಗುತ್ತದೆ ಎಂದು ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
guru
ಸೊರಬ ತಾಲೂಕಿನ ಗೊಗ್ಗೇಹಳ್ಳಿಯಲ್ಲಿ ಆಯೋಜಿಸಿದ್ದ ಲಿಂ. ಶ್ರೀ ನಿಜಗುಣ ಶಿವಾಚಾರ್ಯರ ಪುಣ್ಯಾರಾಧನಾ ಕಾರ್ಯಕ್ರಮದಲ್ಲಿ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಸದಾಶಿವ ಶ್ರೀಗಳು, ಸಂಗಮೇಶ್ವರ ಶ್ರೀಗಳು ಇದ್ದರು.
Published on: 

ಸೊರಬ: ಮನುಷ್ಯನಿಗೆ ಯೋಗ್ಯ ಗುರು ಸಿಕ್ಕರೆ ಜೀವನ ಸಾರ್ಥಕ ಆಗುತ್ತದೆ ಎಂದು ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಗೊಗ್ಗೇಹಳ್ಳಿ ಪಂಚಮಠ ಸಂಸ್ಥಾನದಲ್ಲಿ ಆಯೋಜಿಸಿದ್ದ ಲಿಂ. ನಿಜಗುಣ ಶಿವಾಚಾರ್ಯ ಶಿವಯೋಗಿಗಳ 20ನೇ ಪುಣ್ಯಾರಾಧನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜೀವನದಲ್ಲಿ ಕಷ್ಟಪಟ್ಟರೆ ಎಲ್ಲವೂ ಸಿಗುತ್ತದೆ. ಆದರೆ ಯೋಗ್ಯ ಗುರು ಸಿಗುವುದು ಕಷ್ಟ. ಗೊಗ್ಗೇಹಳ್ಳಿ ನಿಜಗುಣ ಶಿವಯೋಗಿಗಳು ಯೋಗ್ಯರಲ್ಲಿ ಯೋಗ್ಯ ಗುರುಗಳಾಗಿದ್ದರು. ಅಂತಹ ಗುರುಗಳ ಸೇವೆ ಮಾಡುವುದು ನಮ್ಮ ಸುದೈವ. ಅವರ ಒಡನಾಟ ನಮ್ಮನ್ನು ಯೋಗ್ಯ ಸ್ಥಾನದಲ್ಲಿ ಕೂರಿಸಿದೆ ಎಂದರು.

ಮಠಾಧ್ಯಕ್ಷ ಶ್ರೀ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಹಿರಿಯ ಪೂಜ್ಯರು ಶಿವಪೂಜಾ ನಿಷ್ಠರು. ಶಿವಯೋಗದ ಉತ್ತುಂಗಕ್ಕೆ ಏರಿದ್ದರು. ಮೂಲ ಸೌಕರ್ಯ ಇರದ ಸಂದರ್ಭದಲ್ಲಿ ಮಠದ ಕೀರ್ತಿಯನ್ನು ತಮ್ಮ ಶಿವಯೋಗದ ಮೂಲಕ ನಾಡಿನೆಲ್ಲೆಡೆ ಪಸರಿಸಿದರು ಎಂದು ತಿಳಿಸಿದರು.

ಮೂಡಿ ಸಂಸ್ಥಾನ ವಿರಕ್ತಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಗೊಗ್ಗೇಹಳ್ಳಿ ಪೂಜ್ಯರು ಹಠಯೋಗದಲ್ಲಿ ಸಿದ್ಧರಾಗಿದ್ದರು. ಶಿವಯೋಗದಲ್ಲೂ ಅವರದು ಸಿದ್ಧ ಸ್ಥಿತಿ. ಭಕ್ತರ ಕಷ್ಟಗಳನ್ನು ಕೇಳಿ ಅವರಿಗೆ ಸಾಂತ್ವನ ಹೇಳುತ್ತಿದ್ದರು ಎಂದು ಹೇಳಿದರು.

ಪ್ರಾತಃಕಾಲದಲ್ಲಿ ಗುರುಗಳ ಗದ್ದುಗೆಗೆ ಅಭಿಷೇಕ ಹಾಗೂ ಅಷ್ಟೋತ್ತರ ಪೂಜೆ ನೆರವೇರಿತು. ದಾಸೋಹ ಸೇವಾರ್ಥಿ ಸಾಗರದ ಶಿವಾನಂದಯ್ಯ ಹಾಗೂ ಕುಟುಂಬದ ಸದಸ್ಯರನ್ನು ಗೌರವಿಸಲಾಯಿತು. ಶ್ರೀಮಠದ ವೇದಬಳಗದಿಂದ ವೇದಘೋಷ ನಡೆಯಿತು. ಹರ್ಷಿತಾ, ಶುಭಾಂಗಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net