ಸೊರಬದಲ್ಲಿ ತಾಲೂಕು ಪತ್ರಕರ್ತರ ಸಂಘದಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಸರ್ಫ್ರಾಜ್ ಚಂದ್ರಗುತ್ತಿ, ವೈದ್ಯನಾಥ್, ಜಿ.ತೋಟಪ್ಪ, ತಬಲಿ ಬಂಗಾರಪ್ಪ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಲೇಖಕ ಸರ್ಫ್ರಾಜ್ ಚಂದ್ರಗುತ್ತಿ ಅಭಿಮತ
ಸೊರಬದಲ್ಲಿ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ
ಸಾಮಾಜಿಕ ನ್ಯಾಯ ಒದಗಿಸುವುದು ಪತ್ರಿಕಾ ಧರ್ಮ
ಸೊರಬ: ಜನಸಾಮಾನ್ಯರ ಪರವಾಗಿ ಧ್ವನಿ ಎತ್ತುವ ಹಾಗೂ ಸರ್ಕಾರಗಳ ಕಾರ್ಯವೈಖರಿಯನ್ನು ಟೀಕಿಸುತ್ತ ಸಾಮಾಜಿಕ ನ್ಯಾಯ ಒದಗಿಸುವುದೇ ಪತ್ರಿಕಾ ಧರ್ಮ ಎಂದು ಲೇಖಕ ಸರ್ಫ್ರಾಜ್ ಚಂದ್ರಗುತ್ತಿ ಹೇಳಿದರು.
ಪಟ್ಟಣದಲ್ಲಿ ತಾಲೂಕು ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಪತ್ರಿಕೋದ್ಯಮ ಸತ್ಯ, ನಿಷ್ಪಕ್ಷಪಾತವಾಗಿ ಜನಪರ ಧೋರಣೆಯೊಂದಿಗೆ ಕಾರ್ಯನಿರ್ವಹಿಸಿದಾಗ ಪ್ರಜಾಪ್ರಭುತ್ವ ಬಲಿಷ್ಠವಾಗುತ್ತದೆ ಎಂದು ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ ಮಾತನಾಡಿ, ತಾಲೂಕಿನ ಪ್ರಗತಿಯಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು. ಪ್ರತಿನಿಧಿಗಳು ಹಾಗೂ ಜನರ ನಡುವಿನ ಕೊಂಡಿಯಾಗಿ ಕೆಲಸ ಮಾಡಿದ ಪರಿಣಾಮ ಅನೇಕ ಸಂಗತಿಗಳಿಗೆ ಪರಿಹಾರ ಸಿಕ್ಕಿದೆ ಎಂದರು.
"
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪತ್ರಿಕೆಗಳ ಪಾತ್ರ ಅಮೂಲ್ಯ. ಪತ್ರಿಕೋದ್ಯಮದ ಇತಿಹಾಸ, ಹೋರಾಟ ಮತ್ತು ಹೊಣೆಗಾರಿಕೆ ಕುರಿತು ಪ್ರತಿಯೊಬ್ಬರೂ ತಿಳಿಯಬೇಕು. ಪತ್ರಿಕೋದ್ಯಮವು ಸಮಾಜದ ಧ್ವನಿ. ಅಧಿಕಾರವನ್ನು ಪ್ರಶ್ನಿಸುವ ಶಕ್ತಿ ಮತ್ತು ಪ್ರಜಾಪ್ರಭುತ್ವದ ಜೀವಾಳ ಸರ್ಫ್ರಾಜ್ ಚಂದ್ರಗುತ್ತಿಲೇಖಕ
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವೈದ್ಯನಾಥ್ ಮಾತನಾಡಿ, ಪ್ರಜಾಪ್ರಭುತ್ವದ ತಳಹದಿಯಲ್ಲಿ ಪತ್ರಕರ್ತರು ಜವಾಬ್ದಾರಿ ಅರಿತು ಮುನ್ನಡೆಯಬೇಕಿದೆ ಎಂದು ಹೇಳಿದರು.
ವಿವಿಧ ಕ್ಷೇತ್ರದ ಸಾಧಕರಾದ ವಿಶ್ವನಾಥ ಹೆಚ್ಚೆ, ರವಿ ಕೊರಕೋಡು, ಮಂಜಪ್ಪ ಹಿತ್ಲರ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ಎಂ.ಎನ್.ಶ್ರೇಯಸ್, ಅಪೂರ್ವಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಿ.ತೋಟಪ್ಪ, ಜಿಪಂ ಮಾಜಿ ಸದಸ್ಯ ತಬಲಿ ಬಂಗಾರಪ್ಪ, ಚಿಂತಕ ರಾಜಪ್ಪ ಮಾಸ್ತರ್, ಜಿಲ್ಲಾ ಸಂಘದ ಉಪಾಧ್ಯಕ್ಷ ಹುಚ್ರಾಯಪ್ಪ, ದೇಶಾದ್ರಿ ಹೊಸ್ಮನೆ, ಜಿಲ್ಲಾ ಖಜಾಂಚಿ ಎಸ್.ಆರ್.ರಂಜಿತ್, ಜಿಲ್ಲಾ ನಿರ್ದೇಶಕ ನಾಗರಾಜ್ ಜೈನ್, ತಾಲೂಕು ಕಾರ್ಯದರ್ಶಿ ರಾಘವೇಂದ್ರ ಬಾಪಟ್ ಇದ್ದರು.