ಫ.ಗು.ಹಳಕಟ್ಟಿ ಕೊಡುಗೆ ಅನನ್ಯ | F.G. Halakatti Birthday
ಸೊರಬ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ವಚನ ಸಾಹಿತ್ಯದ ಪಿತಾಮಹ ಫ.ಗು.ಹಳಕಟ್ಟಿ ಅವರ ಜನ್ಮದಿನಾಚರಣೆಯಲ್ಲಿ ಗ್ರೇಡ್-2 ತಹಸೀಲ್ದಾರ್ ಲಲಿತಾ, ವಿಕ್ರಮ ಹೆಬ್ಬಾರ್, ಚನ್ನಪ್ಪ, ವಿನು, ಶ್ರುತಿ ಇತರರಿದ್ದರು.
ಸೊರಬ: ಪ್ರಭುತ್ವದ ದರ್ಪಕ್ಕೆ ಒಳಗಾಗಿದ್ದ ವಚನಕಾರರ ವಚನ ಸಾಹಿತ್ಯದ ಹಸ್ತಪ್ರತಿಗಳನ್ನು ಮತ್ತು ಓಲೆ ಗರಿಯ ಗ್ರಂಥಗಳನ್ನು ಸಂಗ್ರಹಿಸಿ ವಚನ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಫ.ಗು.ಹಳಕಟ್ಟಿ ಅವರ ಸಾಧನೆ ಅವಿಸ್ಮರಣೀಯ ಎಂದು ಗ್ರೇಡ್-2 ತಹಸೀಲ್ದಾರ್ ಲಲಿತಾ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಚನ ಸಾಹಿತ್ಯದ ಪಿತಾಮಹ ಫ.ಗು.ಹಳಕಟ್ಟಿ ಅವರ ಜನ್ಮದಿನಾಚರಣೆಯಲ್ಲಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
12ನೇ ಶತಮಾನದ ವಚನ ಸಾಹಿತ್ಯದ ಅಂಶಗಳನ್ನು ಸಂಗ್ರಹ ಮಾಡುವ ನಿಟ್ಟಿನಲ್ಲಿ ಫ.ಗು.ಹಳಕಟ್ಟಿ ಅವರ ಪಾತ್ರ ಮಹತ್ವದ್ದು. ದೂರದೃಷ್ಟಿ ಹೊಂದಿದ್ದ ಅವರು ವಚನ ಸಾಹಿತ್ಯ, ಕೃಷಿ, ನೇಕಾರಿಕೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಅಪಾರ ಜ್ಞಾನ ಹೊಂದಿದ್ದರು. ಅವರ ಸೇವೆ, ತ್ಯಾಗ, ಚಿಂತನೆ ಮಾದರಿಯಾಗಿದೆ ಎಂದರು.