ಶಿವಗನಾಯ್ಕ್ ಹಾಗೂ ಇಬ್ಬರು ಪುತ್ರರ ಮಧ್ಯೆ ಆಸ್ತಿ ಜಗಳ ಮೊದಲಿನಿಂದಲೂ ಇತ್ತು. ಶಿವಗನಾಯ್ಕ್ ಹೊಸ ಮನೆಯಲ್ಲಿ ವಾಸವಾಗಿದ್ದ. ಹಳೇ ಮನೆಯಲ್ಲಿ ಇಬ್ಬರು ಗಂಡು ಮಕ್ಕಳು ವಾಸವಾಗಿದ್ದರು. ಶಿವಗನಾಯ್ಕ್ ಅವರ ಮಕ್ಕಳು ಕೂಲಿ ಕೆಲಸ ಮಾಡುತ್ತಿದ್ದು, ಆಸ್ತಿ ನೀಡುವುದಕ್ಕೆ ತಂದೆ ಸಾತಾಯಿಸುತ್ತಿದ್ದಾರೆ ಎಂದು ಆಕ್ರೋಶಗೊಂಡಿದ್ದರು.
ಭಾನುವಾರ ತಡ ರಾತ್ರಿ ತನ್ನಿಬ್ಬರು ಮಕ್ಕಳು ವಾಸವಿದ್ದ ಹಳೇ ಮನೆಗೆ ಬಂದ ತಂದೆ ಶಿವಗನಾಯ್ಕ್ ಹಳೇ ಮನೆಯನ್ನೂ ಖಾಲಿ ಮಾಡುವಂತೆ ಗಲಾಟೆ ಮಾಡಿದ್ದಾನೆ. ಜಗಳದಲ್ಲಿ ಅಪ್ಪ ಶಿವಗನಾಯ್ಕ್ನನ್ನು ಮಗ ಮಂಜುನಾಥ್ ಹೊಡೆದು ಕೊಲೆ ಮಾಡಿದ್ದಾನೆ.