ಬಂಗಾರಪ್ಪ ನೀಡಿದ ಯೋಜನೆಯಿಂದ ರೈತರ ಬದುಕು ಹಸನು

ಸೊರಬ ತಾಲೂಕಿನ ಪುರ ಗ್ರಾಮದಲ್ಲಿ ಆಯುಷ್ಮಾನ್​ ಆರೋಗ್ಯ ಮಂದಿರ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು. ಅಣ್ಣಪ್ಪ, ಗಣಪತಿ, ಎಂ.ಡಿ.ಶೇಖರ್​, ಕೆ.ಪುರಂದರ, ಶಶಿಧರ ಇತರರಿದ್ದರು.
ಸೊರಬ ತಾಲೂಕಿನ ಪುರ ಗ್ರಾಮದಲ್ಲಿ ಆಯುಷ್ಮಾನ್​ ಆರೋಗ್ಯ ಮಂದಿರ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು. ಅಣ್ಣಪ್ಪ, ಗಣಪತಿ, ಎಂ.ಡಿ.ಶೇಖರ್​, ಕೆ.ಪುರಂದರ, ಶಶಿಧರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಯುಷ್ಮಾನ್​ ಆರೋಗ್ಯ ಮಂದಿರ ಕಾಮಗಾರಿಗೆ ಗುದ್ದಲಿ ಪೂಜೆ
  • 65.ಲ ರೂ.ವೆಚ್ಚದಲ್ಲಿ ಕಾಮಗಾರಿ
  • ಸಚಿವ ಎಸ್​.ಮಧು ಬಂಗಾರಪ್ಪ ಹೇಳಿಕೆ
  • ಬಂಗಾರಪ್ಪ ನೀಡಿದ ಯೋಜನೆಯಿಂದ ರೈತರ ಬದುಕು ಹಸನು
ಬಂಗಾರಪ್ಪ ನೀಡಿದ ಯೋಜನೆಯಿಂದ ರೈತರ ಬದುಕು ಹಸನು
ಸಚಿವ ಎಸ್​.ಮಧು ಬಂಗಾರಪ್ಪ ಹೇಳಿಕೆ > ಆಯುಷ್ಮಾನ್​ ಆರೋಗ್ಯ ಮಂದಿರ ಕಾಮಗಾರಿಗೆ ಗುದ್ದಲಿ ಪೂಜೆ
ಸೊರಬ: ಮಾಜಿ ಮುಖ್ಯಮಂತ್ರಿ ಎಸ್​.ಬಂಗಾರಪ್ಪ ರೈತರ ಬದುಕು ಹಸನಾಗಿಸಲು ನೀರಾವರಿ ಪಂಪ್​ಸೆಟ್​ಗಳಿಗೆ ಉಚಿತ ವಿದ್ಯುತ್​ ನೀಡಿ ನೆಮ್ಮದಿ ಜೀವನ ಸಾಗಿಸಲು ಕಾರಣರಾಗಿದ್ದಾರೆ ಎಂದು ಸಚಿವ ಎಸ್​.ಮಧು ಬಂಗಾರಪ್ಪ ಹೇಳಿದರು.
ತಾಲೂಕಿನ ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರ ಗ್ರಾಮದಲ್ಲಿ ಶುಕ್ರವಾರ 65 ಲ ರೂ.ವೆಚ್ಚದಲ್ಲಿ ಆಯುಷ್ಮಾನ್​ ಆರೋಗ್ಯ ಮಂದಿರ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು.
ಬಂಗಾರಪ್ಪ ಅವರು ಯಾವುದೇ ಪ, ಜಾತಿ, ಮತ, ಧರ್ಮ ತಾರತಮ್ಯವಿಲ್ಲದೆ ನಾಡಿನ ರೈತರಿಗೆ ಉಚಿತವಾಗಿ ವಿದ್ಯುತ್​ ನೀಡಿದರು. ಇದರಿಂದಾಗಿ ರೈತರ ತೋಟಗಳು ಇಂದು ಹಸಿರಿನಿಂದ ಕೂಡಿವೆ. ತಾಲೂಕಿನ ಜನರು ನನಗೆ ಚುನಾವಣೆಯಲ್ಲಿ ಹೆಚ್ಚು ಮತ ನೀಡಿದ್ದರಿಂದ ಶಾಸಕನಾಗಿ, ಶಿಣ ಸಚಿವನಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಇಲಾಖೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಾಗಿದೆ ಎಂದರು.
ಮಳೆಗಾಲ ಆರಂಭವಾಗುವ ಮುನ್ನವೇ ರಸ್ತೆ ಬಾಕಿ ಕಾಮಗಾರಿ ಕಾಮಗಾರಿಗಳನ್ನು ಯಾರಿಗೆ ಟೆಂಡರ್​ ಆಗಿದೆಯೋ ಅವರು ಕೂಡಲೇ ಆರಂಭಿಸಬೇಕು. ಎಲ್ಲೆಲ್ಲಿ ಟೆಂಡರ್​ ಆಗಿದೆಯೋ ಅವೆಲ್ಲವನ್ನೂ ಏಕಕಾಲಕ್ಕೆ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬ್ಲಾಕ್​ ಕಾಂಗ್ರೆಸ್​ ಅಧ್ಯ ಅಣ್ಣಪ್ಪ ಹಾಲಟ್ಟ, ತಾಪಂ ಮಾಜಿ ಅಧ್ಯ ಗಣಪತಿ ಹುಲ್ತಿಕೊಪ್ಪ, ಬಗರ್​ಹುಕುಂ ಸಮಿತಿ ಅಧ್ಯ ಎಂ.ಡಿ.ಶೇಖರ್​, ಗ್ಯಾರಂಟಿ ಯೋಜನೆಗಳ ಸದಸ್ಯ ಪ್ರಭಾಕರ, ತಹಸೀಲ್ದಾರ್​ ಕೆ.ಪುರಂದರ, ಇಒ ಶಶಿಧರ, ಜಗದೀಶ್​, ಸುರೇಶ್​, ಬಸವೇಶ್​, ನಾಗಪ್ಪ, ಮಹೇಶ್​, ರಮೇಶ್​, ನಾಗರಾಜ್​ ಇತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net