ಡಾ. ಆರ್.ಸಿ.ಜಗದೀಶ್‌ಗೆ ಬೀಳ್ಕೊಡುಗೆ

ಆನಂದಪುರ ಸಮೀಪದ ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ಅವರಿಗೆ ಬೀಳ್ಕೊಡಲಾಯಿತು. ಡಾ. ಹೇಮ್ಲಾನಾಯ್ಕಾ, ಡಾ ಗಣಪತಿ ಇತರರಿದ್ದರು.
ಆನಂದಪುರ ಸಮೀಪದ ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ಅವರಿಗೆ ಬೀಳ್ಕೊಡಲಾಯಿತು. ಡಾ. ಹೇಮ್ಲಾನಾಯ್ಕಾ, ಡಾ ಗಣಪತಿ ಇತರರಿದ್ದರು.
Published on
ಆನಂದಪುರ: ಸಮೀಪದ ಇರುವಕ್ಕಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಷಯಗಳ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ವಯೋನಿವೃತ್ತರಾದ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ನೀಡಿ ಗೌರವಿಸಲಾಯಿತು.
ಹಿರಿಯ ಸಂಶೋಧಕ ಡಾ. ಹೇಮ್ಲಾನಾಯ್ಕಾ ಮಾತನಾಡಿ, ರಾಜ್ಯದ ನಾಲ್ಕು ವಿವಿಗಳಲ್ಲಿ ಕಾರ್ಯನಿರ್ವಹಿಸಿದ ಜಗದೀಶ್ ಶ್ರೇಷ್ಠ ಅನುಭವಿ ಕೃಷಿ ಚೇತನ. ಕೃಷಿ ಶಿಕ್ಷಣ ಮತ್ತು ಸಂಶೋಧನಾ ರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ಉನ್ನತ ಆಡಳಿತಗಾರ, ನೂತನ ಆವಿಷ್ಕಾರಗಳ ಬಗ್ಗೆ ನಿರಂತರ ಸಂಶೋಧನೆ ಮಾಡುತ್ತಿರುವ ವ್ಯಕ್ತಿಯಾಗಿದ್ದಾರೆ ಎಂದರು.
ಮಣ್ಣು ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಗಣಪತಿ ಮಾತನಾಡಿ, ಇರುವಕ್ಕಿ ವಿವಿಗೆ ಹೊಸ ರೂಪ ಕೊಟ್ಟಿರುವ ಕಾರ್ಯ ಶ್ಲಾಘನೀಯ. ಇರುವಕ್ಕಿ ವಿವಿಯಲ್ಲಿ ಹೊಸ ಹೊಸ ಅಧ್ಯಯನ ವಿಭಾಗ ತೆರೆದು ದೇಶದ ಪ್ರತಿಷ್ಠಿತ ವಿವಿಗಳ ಸಾಲಿಗೆ ಸೇರಿಸಿದ ಕೀರ್ತಿ ಇವರಿಗೆ ಸೇರಿದೆ ಎಂದು ತಿಳಿಸಿದರು.
ವಿವಿ ಹಿರಿಯ ಉಪನ್ಯಾಸಕ ಡಾ. ಶ್ರೀಧರ್, ಡಾ. ವೀರಣ್ಣ, ಡಾ. ಪ್ರದೀಪ್, ಡಾ. ಧನಂಜಯ್, ಅವಿನಾಶ್, ಪ್ರಿಯಾಂಕಾ, ರವಿಶಂಕರ್, ತಿಪ್ಪೇಶಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net