ಮೇ 10ರಿಂದ 20ರ ನಡುವೆ ಮೂರು ಮೊಬೈಲ್ ನಂಬರ್‌ಗಳಿಂದ ಮ್ಯಾನೇಜರ್‌ಗೆ ಗಣೇಶ್ ಫೋನ್ ಮಾಡಿದ್ದ. ತಾನು ಈ ಹಿಂದೆ ಅದೇ ಸಂಸ್ಥೆಯ ಬಸ್(Bus)ಗಳಲ್ಲಿ ಕೆಲಸ ಮಾಡಿದ್ದಾಗಿ ಪರಿಚಯಿಸಿಕೊಂಡಿದ್ದ. ನಂತರ ವಿಜಯವಾಡದಲ್ಲಿ ಕೇಬಲ್‌ಗೆ ಟ್ರಂಚ್ ಮಾಡುವಾಗ ಮಡಿಕೆ ಸಿಕ್ಕಿದ್ದು, ಅದರಲ್ಲಿ ಮೂರು ಕೆಜಿ ಚಿನ್ನದ ಸರಗಳಿವೆ. ಹಣದ ಅವಶ್ಯಕತೆ ಇರುವುದರಿಂದ ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿದ್ದ.