ಚರಕ ಕೈಮಗ್ಗ ಉತ್ಪನ್ನಗಳ ಪ್ರದರ್ಶನ 6ರಿಂದ | Exhibition

ಚರಕ ಸಂಸ್ಥೆಯ ಕೈಮಗ್ಗ
ಚರಕ ಸಂಸ್ಥೆಯ ಕೈಮಗ್ಗ
Published on
ಸಾಗರ: ನಗರದಲ್ಲಿ ಮಾ.6ರಿಂದ 8ರವರೆಗೆ ಮೂರು ದಿನಗಳ ಚರಕದ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಆಹಾರ ಮೇಳವನ್ನು ಬ್ರಾಸಂ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಂಘದ ಪದ್ಮಶ್ರೀ ಮಾಹಿತಿ ನೀಡಿದರು.
ಚರಕ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿರುವ ಪ್ರದರ್ಶನ ಮತ್ತು ಮಾರಾಟದಲ್ಲಿ ಬೇರೆಬೇರೆ ಭಾಗಗಳಿಂದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಪ್ರತಿದಿನ ಬೆಳಗ್ಗೆ 10.30ರಿಂದ ರಾತ್ರಿ 8.30ರವರೆಗೆ ಪ್ರದರ್ಶನ ಇರುತ್ತದೆ. ಕೈಮಗ್ಗ ಮತ್ತು ಜವಳಿ ಇಲಾಖೆ ಸಹಯೋಗದಲ್ಲಿ ಪವಿತ್ರ ವಸ್ತ್ರ ಯೋಜನೆಯಡಿ ಮೇಳವನ್ನು ಆಯೋಜಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಒಟ್ಟು ಎಂಟು ಮಳಿಗೆಗಳಲ್ಲಿ ಚರಕ ಕೈಮಗ್ಗದ ಸಿದ್ಧ ಉಡುಪುಗಳು, ಬಟ್ಟೆಗಳು, ನೈಸರ್ಗಿಕ ಬಣ್ಣದ ಬೆಡ್‌ಸ್ಪ್ರೆಡ್‌ಗಳು, ಜಮ್ದಾನಿ ಬಟ್ಟೆಯಿಂದ ತಯಾರಿಸಿದ ಸೀರೆ, ಖುರ್ತಾ, ಶರ್ಟ್ ಹಾಗೂ ಗೃಹಾಲಂಕಾರ ಉಡುಪುಗಳು ಲಭ್ಯವಿದೆ. ಉತ್ತರ ಕರ್ನಾಟಕ ಭಾಗದ ಸೀರೆಗಳು, ಕರಕುಶಲ ವಸ್ತುಗಳು, ಶಿರಸಿಯ ಬಾಳೆನಾರಿನ ಉತ್ಪನ್ನಗಳು, ನೈಸರ್ಗಿಕ ಸೌಂದರ್ಯ ವರ್ಧಕಗಳು, ಮಣ್ಣಿನಿಂದ ತಯಾರಿಸಿದ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ ಎಂದರು.
ವಿಶೇಷವಾಗಿ ಮಲೆನಾಡಿನ ಖಾದ್ಯವನ್ನು ಒಳಗೊಂಡ ಆಹಾರ ಮೇಳವನ್ನು ಮಧ್ಯಾಹ್ನ 3ರಿಂದ ರಾತ್ರಿ 8ರವರೆಗೆ ಆಯೋಜಿಸಿದೆ. ಸಾಂಪ್ರದಾಯಿಕ 50ಕ್ಕೂ ಹೆಚ್ಚು ಬಗೆಯ ಖಾದ್ಯಗಳು ಆಹಾರ ಮೇಳದಲ್ಲಿ ಲಭ್ಯವಿರುತ್ತದೆ. ಸ್ಥಳೀಯ ಮಹಿಳಾ ಸಂಘಗಳು, ಮಹಿಳೆಯರು ವಿಶೇಷ ಖಾದ್ಯವನ್ನು ಸ್ಥಳದಲ್ಲಿಯೇ ತಯಾರಿಸಿ ಕೊಡಲಿದ್ದಾರೆ ಎಂದು ತಿಳಿಸಿದರು. ಚರಕ ಅಧ್ಯಕ್ಷೆ ಮಹಾಲಕ್ಷ್ಮೀ, ರಮೇಶ್ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net