ವ್ಯವಸಾಯದೊಂದಿಗೆ ಜೇನುಕೃಷಿಯಲ್ಲಿ ತೊಡಗಿಸಿಕೊಳ್ಳಿ

ಸೊರಬದ ತಲಕಾಲುಕೊಪ್ಪ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜೇನುಕೃಷಿ ಕಾರ್ಯಗಾರದಲ್ಲಿ ಮಧುಬನ ಜೇನು ಸಂಸ್ಕರಣಾ ಸಂಸ್ಥೆ ಅಧ್ಯಕ್ಷ ಕೆ.ವಿ.ಗೌಡ ಮಾತನಾಡಿದರು. ಅಶೋಕ ಹೆಗಡೆ, ವೆಂಕಟೇಶ್, ಸುಂದರೇಶ ಇತರರಿದ್ದರು.
ಸೊರಬದ ತಲಕಾಲುಕೊಪ್ಪ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜೇನುಕೃಷಿ ಕಾರ್ಯಗಾರದಲ್ಲಿ ಮಧುಬನ ಜೇನು ಸಂಸ್ಕರಣಾ ಸಂಸ್ಥೆ ಅಧ್ಯಕ್ಷ ಕೆ.ವಿ.ಗೌಡ ಮಾತನಾಡಿದರು. ಅಶೋಕ ಹೆಗಡೆ, ವೆಂಕಟೇಶ್, ಸುಂದರೇಶ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ನಿರ್ದೇಶಕ ಅಶೋಕ ಹೆಗಡೆ
  • ತಲಕಾಲುಕೊಪ್ಪದಲ್ಲಿ ರೈತರಿಗೆ ಕಾರ್ಯಾಗಾರ
ಸೊರಬ: ಜೇನು ತುಪ್ಪಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ರೈತರು ಕೃಷಿ ಜತೆ ಜೇನು ಸಾಕಣೆ ಮಾಡಲು ಮುಂದಾಗಬೇಕು ಎಂದು ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ನಿರ್ದೇಶಕ ಅಶೋಕ ಹೆಗಡೆ ಹೇಳಿದರು.
ತಾಲೂಕಿನ ತಲಕಾಲುಕೊಪ್ಪ ಗ್ರಾಮದಲ್ಲಿ ತೋಟಗಾರಿಕಾ ಇಲಾಖೆ, ನಿಸರಾಣಿಯ ಮಧುಬನ ಜೇನು ಸಂಸ್ಕರಣಾ ಮತ್ತು ಮಾರಾಟ ಸಹಕಾರ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜೇನುಕೃಷಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ರೈತರು ಜೇನು ಕೃಷಿ ಮಾಡುವಾಗ ಪ್ರಾಥಮಿಕ ಹಂತದ ತರಬೇತಿ ಪಡೆಯುವುದು ಉತ್ತಮ. ಜೇನುಹುಳಗಳ ಬಗ್ಗೆ ವೈಜ್ಞಾನಿಕ ಅರಿವು ಅವಶ್ಯ. ಅಡಕೆ ಹೂವಿನ ಹಾಗೂ ಅಂಟವಾಳ ಹೂವಿನಿಂದ ತಯಾರಿಸಿದ ಜೇನುತುಪ್ಪಕ್ಕೆ ಹೆಚ್ಚಿನ ಬೆಲೆ ಇದೆ ಎಂದು ತಿಳಿಸಿದರು.
"

ನಿರಂತರ ಕಲಿಕೆಯಿಂದ ಜೇನು ಕೃಷಿ ಅಭಿವೃದ್ಧಿಪಡಿಸಲು ಸಾಧ್ಯ. ಸೊರಬ, ಸಾಗರ, ತೀರ್ಥಹಳ್ಳಿ, ಹೊಸನಗರ ಪ್ರದೇಶಗಳಲ್ಲಿ ಜೇನು ಕೃಷಿಗೆ ಉತ್ತಮ ವಾತಾವರಣವಿದೆ. ಇಲಾಖೆಯಿಂದ ಜೇನು ಕೃಷಿಗೆ ಜಿಲ್ಲೆ, ರಾಜ್ಯ ಹಾಗೂ ಕೇಂದ್ರ ವಲಯದಲ್ಲಿ ಸಬ್ಸಿಡಿ ದರದಲ್ಲಿ ಉಪಕರಣಗಳನ್ನು ವಿತರಣೆ ಮಾಡಲಾಗುತ್ತದೆ. 

 ವೆಂಕಟೇಶ್ 

ತೋಟಗಾರಿಕಾ ಸಹಾಯಕ ನಿರ್ದೇಶಕ

ಮಧುಬನ ಜೇನು ಸಂಸ್ಕರಣಾ ಮತ್ತು ಮಾರಾಟ ಸಂಸ್ಥೆ ಅಧ್ಯಕ್ಷ ಕೆ.ವಿ.ಗೌಡ ಮಾತನಾಡಿ, ಆಸಕ್ತ ರೈತರು ಜೇನುಕೃಷಿ ಉದ್ದಿಮೆಯಿಂದ ಸಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ. ಸರ್ಕಾರ ಜೇನು ಕೃಷಿಗೆ ಉತ್ತೇಜನ ನೀಡಲು ಮುಂದಾಗಿದೆ. ನಮ್ಮ ಸಂಸ್ಥೆಯಿಂದ ಗುಣಮಟ್ಟದ ಪೆಟ್ಟಿಗೆಗಳನ್ನು ಕೂಡ ನೀಡಲಾಗುತ್ತದೆ. ನಿಸರಾಣಿ ಗ್ರಾಪಂ ವ್ಯಾಪ್ತಿಯಲ್ಲಿ ಸಂಘದ ಕಟ್ಟಡ ನಿರ್ಮಾಣಕ್ಕೆ ಒಂದು ನಿವೇಶನ ನೀಡುವಂತೆ ಕೋರಲಾಗಿದೆ ಎಂದು ಮಾಹಿತಿ ನೀಡಿದರು.
ಜೇನು ಕೃಷಿ ತರಬೇತುದಾರ ವಿಘ್ನೇಶ್ ಮಾತನಾಡಿ, ತಾಲೂಕಿನಲ್ಲಿ ಈವರೆಗೆ 9 ಜನರಿಗೆ ಜೇನುಕೃಷಿ ತರಬೇತಿ ನೀಡಲಾಗಿದೆ. ಮಧುಬನ ಸಂಸ್ಥೆಯಿಂದ ತಯಾರಿಸಿದ ಜೇನುತುಪ್ಪ ರಾಜ್ಯ ಮತ್ತು ಹೊರರಾಜ್ಯದಲ್ಲಿ ಕೂಡ ಬೇಡಿಕೆ ಇರುವುದು ಸಂತಸದ ಸಂಗತಿ ಎಂದರು. ಮಧುಬನ ಸಂಸ್ಥೆ ಉಪಾಧ್ಯಕ್ಷ ಸುಂದರೇಶ್, ಸದಸ್ಯ ನವೀನ್, ನಿವೃತ್ತ ಪ್ರಾಧ್ಯಾಪಕ ಡಾ. ಶಾಮಸುಂದರ, ಪಿಡಿಒ ಸೀಮಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net