ಭದ್ರಾವತಿಯಲ್ಲಿ ತುಳು ಕೂಟದಿಂದ ಆಯೋಜಿಸಿದ್ದ ತುಳು ಉತ್ಸವವನ್ನು ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಉದ್ಘಾಟಿಸಿದರು. ಪಿ.ಸುಧಾಕರ ಶೆಟ್ಟಿ, ಡಾ. ಹರೀಶ ದೇಲಂತಬೆಟ್ಟು, ಬಿ. ಸುಬ್ಬಣ್ಣ ರೈ ಇತರರಿದ್ದರು.
ಭದ್ರಾವತಿ: ತುಳು ಭಾಷೆಗೆ ತನ್ನದೇ ಆದ ಇತಿಹಾಸ ಪರಂಪರೆ ಇದ್ದು, ನಾಡಿನ ಎಲ್ಲೆಡೆ ತುಳು ಭಾಷೆ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು.
ನಗರದ ಬಂಟರ ಭವನದಲ್ಲಿ ತುಳು ಕೂಟದಿಂದ ಆಯೋಜಿಸಿದ್ದ ತುಳು ಉತ್ಸವ-2026 ಉದ್ಘಾಟಿಸಿ ಮಾತನಾಡಿ, ತುಳುನಾಡಿನ ಸಾಹಿತ್ಯ, ಸಂಸ್ಕೃತಿ, ಭಾಷೆ ವೈವಿಧ್ಯದಿಂದ ಕೂಡಿದೆ. ಹೋರಾಟ ನಡೆಸಿದ ಪರಿಣಾಮ ಸರ್ಕಾರ ತುಳುನಾಡಿನ ಭಾಗದ ಶಾಲೆಗಳಲ್ಲಿ ತುಳುವನ್ನು ಒಂದು ಆಯ್ಕೆಯ ಭಾಷೆಯಾಗಿಸಿದೆ ಎಂದು ತಿಳಿಸಿದರು.
ತುಳು ಕೂಟದ ಅಧ್ಯಕ್ಷ ಪಿ.ಸುಧಾಕರ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಸದಸ್ಯ, ಸಾಹಿತಿ ಕುಂಬ್ರ ದುರ್ಗಾಪ್ರಸಾದ್ ರೈ, ತುಳುನಾಡಿನ ಕೃಷಿ, ಬದುಕಿನ ಆಚರಣೆ-ಆರಾಧನೆಗಳು ಕುರಿತು ಉಪನ್ಯಾಸ ನೀಡಿದರು.
ಪ್ರಧಾನ ಕಾರ್ಯದರ್ಶಿ ಡಾ. ಹರೀಶ ದೇಲಂತಬೆಟ್ಟು, ಖಜಾಂಚಿ ಡಾ. ವೈ.ಆನಂದ್, ಉಪಾಧ್ಯಕ್ಷ ನಾರಾಯಣ ಪೂಜಾರಿ, ಕಾರ್ಯದರ್ಶಿ ಬಿ.ಸುಬ್ಬಣ್ಣ ರೈ, ಸಹಕಾರ್ಯದರ್ಶಿ ಶಾಮರಾಯ ಆಚಾರ್, ಪ್ರಕಾಶ್ ಪಿಂಟೋ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಉಪಸ್ಥಿತರಿದ್ದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬೆಳಗ್ಗೆ ‘ತುಳುನಾಡಿನ ಆಚರಣೆ-ಆರಾಧನೆಗಳ ಲೋಕ ದೃಷ್ಟಿ’ ಕನ್ನಡ ಜಗತ್ತಿಗೆ ತುಳು ಲೋಕದ ಪರಿಚಯ ಮಾಲಿಕೆ ಕಾರ್ಯಕ್ರಮ ನಡೆಯಿತು. ಕವಿಗಳಾದ ದೀಪ್ತಿ ಹರ್ಷ, ನಂದಿನಿ ಮಲ್ಲಿಕಾರ್ಜುನ, ಪೂರ್ಣಿಮಾ ಉಡುಪ, ಅಂಬಿಕಾ ದೇವರಾಜ್ ಇತರರಿದ್ದರು.