ರಾಷ್ಟ್ರೀಯ ಚಿಂತನೆ ಮೈಗೂಡಿಸಿಕೊಳ್ಳಿ | sports day

ಶಿಕಾರಿಪುರದಲ್ಲಿ ಸರ್ಕಾರಿ ಪಿಯು ಕಾಲೇಜಿನ ಕ್ರೀಡಾ, ಸಾಂಸ್ಕೃತಿಕ ಸಮಾರೋಪ ಸಮಾರಂಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಗೌರವಿಸಲಾಯಿತು. ಬಿ.ಎಸ್.ಪಾಟೀಲ್, ರವೀಂದ್ರ, ತಿಪ್ಪೇಶಪ್ಪ, ಹಾಲೇಶಪ್ಪ,  ಮಂಗಳಾ, ರೇಣುಕಾ ಇತರರಿದ್ದರು.
ಶಿಕಾರಿಪುರದಲ್ಲಿ ಸರ್ಕಾರಿ ಪಿಯು ಕಾಲೇಜಿನ ಕ್ರೀಡಾ, ಸಾಂಸ್ಕೃತಿಕ ಸಮಾರೋಪ ಸಮಾರಂಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಗೌರವಿಸಲಾಯಿತು. ಬಿ.ಎಸ್.ಪಾಟೀಲ್, ರವೀಂದ್ರ, ತಿಪ್ಪೇಶಪ್ಪ, ಹಾಲೇಶಪ್ಪ, ಮಂಗಳಾ, ರೇಣುಕಾ ಇತರರಿದ್ದರು.
Published on
ಶಿಕಾರಿಪುರ: ದೇಶದ ಭವಿಷ್ಯ ರೂಪಿಸುವ ಯುವಕ, ಯುವತಿಯರು ರಾಷ್ಟ್ರೀಯ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾ, ಸಾಂಸ್ಕೃತಿಕ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣ ನಮ್ಮ ಬದುಕಿನ ಮೂಲ ಮಂತ್ರವಾಗಬೇಕು. ಯಾವ ಕಾರಣಕ್ಕೂ ಯುವಕರು ಶಿಕ್ಷಣದಿಂದ ವಂಚಿತರಾಗಬಾರದು. ಉನ್ನತ ಶಿಕ್ಷಣವನ್ನು ಪಡೆದು ಸಮಾಜದ ಉನ್ನತ ಸ್ಥಾನ ಪಡೆಯಬೇಕು ಎಂದರು.
ಯುವಕರು ದುಶ್ಚಟಗಳಿಗೆ ದಾಸರಾಗದೆ ಬದುಕನ್ನು ರೂಪಿಸುವ ಶಿಕ್ಷಣದ ಕಡೆಗೆ ಗಮನ ಕೊಡಬೇಕು. ಸಹನೆ, ಸೌಹಾರ್ದತೆ ಮತ್ತು ಸಹಬಾಳ್ವೆಯ ಜತೆಗೆ ಸಾಮಾಜಿಕ ಕಳಕಳಿಯನ್ನು ರೂಢಿಸಿಕೊಳ್ಳಬೇಕು. ಸಮಾಜದ ಋಣವನ್ನು ಜನಪರ ಕಾರ್ಯಗಳ ಮೂಲಕ ತೀರಿಸಬೇಕು. ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ನಮ್ಮ ತಾಯಿ ದಿ. ಮೈತ್ರಾದೇವಿ ಅವರ ಹೆಸರಿನಲ್ಲಿ ಪುರಸ್ಕರಿಸಲಾಗುತ್ತಿದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಎಸ್.ಪಾಟೀಲ್, ಸದಸ್ಯರಾದ ರವೀಂದ್ರ, ತಿಪ್ಪೇಶಪ್ಪ, ಹಾಲೇಶಪ್ಪ, ಪ್ರಾಚಾರ್ಯ ನಾಗಾನಾಯ್ಕ, ಉಪನ್ಯಾಸಕರಾದ ಷಣ್ಮುಖಪ್ಪ, ನಂಜಪ್ಪ, ಮಂಗಳಾ, ರೇಣುಕಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net