ಆನೆಗಳನ್ನು ಕಾಡಿಗಟ್ಟುವ ಕಾರ್ಯ ಇಂದಿನಿಂದ | Elephant

ಸೊರಬ ತಾಲೂಕಿನ ಕ್ಯಾಸನೂರು ಮತ್ತು ಬರಗಿ ಕಾಡಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಓಡಿಸಲು ಸಕ್ರೆಬೈಲು ಆನೆ ಬಿಡಾರದಿಂದ ಕರೆತಂದ ಆನೆಗಳು.
ಸೊರಬ ತಾಲೂಕಿನ ಕ್ಯಾಸನೂರು ಮತ್ತು ಬರಗಿ ಕಾಡಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಓಡಿಸಲು ಸಕ್ರೆಬೈಲು ಆನೆ ಬಿಡಾರದಿಂದ ಕರೆತಂದ ಆನೆಗಳು.
Published on
ಸೊರಬ: ತಾಲೂಕಿನ ಉಳವಿ ಹೋಬಳಿ ವ್ಯಾಪ್ತಿಯ ಕಣ್ಣೂರು, ಕೈಸೋಡಿ, ದೂಗೂರು, ಬರಗಿ, ಕ್ಯಾಸನೂರು, ಉಮಟೆಗದ್ದೆ ಭಾಗಗಳಲ್ಲಿ ಕಳೆದ ಒಂದು ವಾರದಿಂದ ರೈತರ ನಿದ್ದೆಗೆಡಿಸಿದ್ದ ಕಾಡಾನೆಗಳನ್ನು ಕಾಡಿಗಟ್ಟಲು ಸಕ್ರೆಬೈಲು ಆನೆ ಬಿಡಾರದಿಂದ ಸೋಮವಾರ ನಾಲ್ಕು ಆನೆಗಳನ್ನು ಕರೆತರಲಾಗಿದೆ.
ಕಾಡಾನೆಗಳು ಭತ್ತ, ಕಬ್ಬು, ಭತ್ತದ ರಾಶಿಗಳನ್ನು ಸಂಪೂರ್ಣ ಹಾಳು ಮಾಡಿವೆ. ಇವುಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆಯವರು ಸತತ ಕಾರ್ಯಾಚರಣೆ ನಡೆಸಿದರೂ ಸಾಧ್ಯವಾಗಿರಲಿಲ್ಲ. ಇದೀಗ ಕಾಡಾನೆಗಳನ್ನು ಕಾಡಿಗಟ್ಟಲು ಸಕ್ರೆಬೈಲಿನಿಂದ ಅರ್ಜುನ, ಭೀಷ್ಮ, ಸೋಮ, ಅಶ್ವತ್ಥಾಮ ಎಂಬ ಆನೆಗಳನ್ನು ಮಂಗಳವಾರ ಬೆಳಗ್ಗೆಯಿಂದ ಕಾರ್ಯಾಚರಣೆಗೆ ಇಳಿಸಲಾಗುವುದು ಎಂದು ಅರಣ್ಯ ಇಲಾಖೆ ಸಿಸಿಎಫ್ ಟಿ ಹನುಮಂತಪ್ಪ ಹೇಳಿದರು.
ಜನವಸತಿ ಪ್ರದೇಶ, ತೋಟ, ಹೊಲ ಗದ್ದೆಗಳಲ್ಲಿ ಕೆಲಸ ಮಾಡುವವರು ಹೆಚ್ಚು ಜಾಗ್ರತೆ ವಹಿಸಬೇಕು. ಥರ್ಮಲ್ ಡ್ರೋನ್, ಎಲಿೆಂಟ್ ಟಾಸ್‌‌ಕೆೆರ್ಸ್, ತಮಟೆ, ಏರ್ ಗನ್, ಪಟಾಕಿ  ಮೊದಲಾದವುಗಳನ್ನು ಬಳಕೆ ಮಾಡಿಕೊಂಡು ಕಾರ್ಯಾಚರಣೆ ನಡೆಸಲಾಗುವುದು. ಆನೆಗಳು ಯಾವ ಭಾಗದಿಂದ ಬಂದಿವೆಯೋ ಆ ಮಾರ್ಗದಲ್ಲಿಯೇ ಕಳಿಸುವ ಪ್ರಯತ್ನ ಮಾಡಲಾಗುವುದು. ಆನೆಯ ದಾಳಿಯಿಂದ ಬೆಳೆ ಹಾನಿಯಾದ ರೈತರಿಗೆ ಸರ್ಕಾರದಿಂದ ಪರಿಹಾರ ದೊರಕಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಇಲಾಖೆಯ ಸಿಬ್ಬಂದಿ ಮತ್ತು ಜನರ ಸಮೀಪವೇ ಕಾಡುಕೋಣ ಪ್ರತ್ಯಕ್ಷವಾಗಿ ಓಡಿಹೋಯಿತು. ಡಿಸಿಎ್ ಮೋಹನ್‌ಕುಮಾರ್, ಎಸಿಎ್ ಸುರೇಶ್ ಕಲ್ಲೊಳ್ಳಿ, ರವೀಂದ್ರನಾಯಕ್, ಅಣ್ಣಪ್ಪ, ಶ್ರೀಪಾದ ನಾಯ್ಕ, ಶಾಂತಪ್ಪ, ರಾಮಪ್ಪ, ಯೋಗರಾಜ್, ಗಣಪತಿ ಎಚ್. ಹುಲ್ತಿಕೊಪ್ಪ, ಪ್ರಕಾಶ್, ನಾಗರಾಜ್, ಪುಟ್ಟಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net