ಉಜ್ವಲ ಭವಿಷ್ಯಕ್ಕೆ ಶಿಕ್ಷಣವೇ ಬುನಾದಿ | science fair

ಕಾನುಗೋಡು ಗ್ರಾಮದ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಫಾ. ರೆವರೆಂಡ್ ಪಿಂಟೋ, ಶಂಕರ ಐತಾಳ್, ಗಣೇಶ್, ಅಶ್ವಿನ್‌ಕುಮಾರ್, ಭವ್ಯಾ ಇತರರಿದ್ದರು.
ಕಾನುಗೋಡು ಗ್ರಾಮದ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಫಾ. ರೆವರೆಂಡ್ ಪಿಂಟೋ, ಶಂಕರ ಐತಾಳ್, ಗಣೇಶ್, ಅಶ್ವಿನ್‌ಕುಮಾರ್, ಭವ್ಯಾ ಇತರರಿದ್ದರು.
Published on
ಹೊಸನಗರ: ಬಾಲ್ಯದಲ್ಲಿ ಶಿಕ್ಷಣದ ಮೇಲೆ ಗಮನ ಕೇಂದ್ರೀಕರಿಸಿ ಮುನ್ನಡೆದರೆ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಕಬಳೆ ಚರ್ಚ್ ಫಾ. ರೆವರೆಂಡ್ ಪಿಂಟೋ ತಿಳಿಸಿದರು.
ತಾಲೂಕಿನ ಕಾನುಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ, ಪ್ರತಿ ಮಗುವಿನಲ್ಲೂ ಒಂದಲ್ಲಾ ಒಂದು ಪ್ರತಿಭೆ ಇರುತ್ತದೆ. ಅದು ಅನಾವರಣಗೊಳ್ಳಲು ಸೂಕ್ತ ವೇದಿಕೆ ಅಗತ್ಯ ಎಂದರು.
ಗೀತಾ ಫೌಂಡೇಶನ್ ಸಂಸ್ಥಾಪಕ ಶಂಕರ ಐತಾಳ್ ಮಾತನಾಡಿ, ವಿಜ್ಞಾನ ಮೇಳ ಆಯೋಜಿಸುವುದು ಸುಲಭವಲ್ಲ. ಈ ದಿಸೆಯಲ್ಲಿ ಕಾನುಗೋಡು ಸರ್ಕಾರಿ ಪ್ರೌಢಶಾಲೆ ಶಿಕ್ಷಕ ವೃಂದ ಮಾದರಿ ಎಂದರು.
ವಿಜ್ಞಾನ ಮೇಳದಲ್ಲಿ ಸೌರಮಂಡಲ, ಸೌರಶಕ್ತಿ, ಪರಿಸರ ಜ್ಞಾನ, ಪುರಾತನ ಅಡುಗೆ ಸಲಕರಣೆಗಳು, ಭಾಷಾ ಜ್ಞಾನ ಸೇರಿ ಹಲವು ವಿಷಯಗಳ ಕುರಿತಾಗಿ ಮಾಡೆಲ್ ರಚಿಸಿ, ಸಂವಹನ ನಡೆಸಿದ್ದು ಗಮನ ಸೆಳೆಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸಾನಿಯಾ ಡಿಸೋಜ, ಪ್ರಜ್ಞಾ, ಅಮೃತಾ ಅವರನ್ನು ಸನ್ಮಾನಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್, ಹೊಸನಗರ ಪಪಂ ಸದಸ್ಯ ಅಶ್ವಿನ್‌ಕುಮಾರ್, ಕರಿಮನೆ ಗ್ರಾಪಂ ಉಪಾಧ್ಯಕ್ಷೆ ಸೀತಮ್ಮ, ಸಿಆರ್‌ಪಿ ರೇಖಾ ಪ್ರಭಾಕರ್, ಆರ್ಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಮುಷ್ತಾಕ್ ಅಹಮದ್, ಸಾಮಾಜಿಕ ಕಾರ್ಯಕರ್ತ ರವಿಶಾಸ್ತ್ರಿ, ನಿವೃತ್ತ ಯೋಧ ವೀರೇಂದ್ರ, ಮುಖ್ಯ ಶಿಕ್ಷಕ ತಿಮ್ಮಪ್ಪ, ರಾಜೇಶ, ಭವ್ಯಾ, ಪ್ರಕಾಶ ವಾರದ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net