ಭದ್ರಾವತಿಯ ಹಿಂದುಳಿದ ವರ್ಗಗಳ ಬಾಲಕಿಯರ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯರ ಸುರಕ್ಷೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಸಬ್ ಇನ್ಸ್ಕ್ಟರ್ ಕವಿತಾ, ಅನ್ನಪೂರ್ಣಾ, ಶಕುಂತಲಾ ಇತರರಿದ್ದರು.
ಭದ್ರಾವತಿ: ಜೀವನದ ನಿರ್ಣಾಯಕ ಟ್ಟದಲ್ಲಿರುವ ವಿದ್ಯಾರ್ಥಿನಿಯರು ಶ್ರದ್ಧೆಯಿಂದ ಓದಿ ಒಳ್ಳೆಯ ಜೀವನ ರೂಪಿಸಿಕೊಳ್ಳಬೇಕು. ಸಮಾಜದಲ್ಲಿ ನಡೆಯುತ್ತಿರುವ ಮೋಸ, ವಂಚನೆಯಿಂದ ಜಾಗೃತರಾಗಿ ಬಾಳಬೇಕು ಎಂದು ಸಬ್ಇನ್ಸ್ಪೆಕ್ಟರ್ ಕವಿತಾ ಹೇಳಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬಿಜೆಪಿ ಗ್ರಾಮಾಂತರ ಹಾಗೂ ನಗರ ಮಹಿಳಾ ಮೋರ್ಚಾದಿಂದ ದೇವರಾಜ ಅರಸು ಮೆಟ್ರಿಕ್ ನಂತರದ ಹಿಂದುಳಿದ ವರ್ಗಗಳ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿನಿಯರ ಸುರಕ್ಷೆ ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಸರ್ಕಾರಿ ನೌಕರಿ ಪಡೆದು ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಬೇಕು ಎಂದು ಸಲಹೆ ನೀಡಿದರು.
ಯುವತಿಯರಿಗೆ ದೈಹಿಕ ಆಗಲಿ ಅಥವಾ ಮಾನಸಿಕ ಕಿರುಕುಳ ನೀಡಿದರೆ 112ಕ್ಕೆ ಕರೆ ಮಾಡುವ ಮೂಲಕ ಖುದ್ದಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿ. ಕಾನೂನು ಸದಾ ನಿಮ್ಮ ಜತೆಯಲ್ಲಿರುತ್ತದೆ ಎಂದರು.