ಡಣಾಯಕಪುರದಲ್ಲಿ ಕಾಲುಬಾಯಿ ರೋಗಕ್ಕೆ ಪಶುವೈದ್ಯಾಧಿಕಾರಿ ಡಾ.ಬೃಂದಾ ಲಸಿಕೆ ನೀಡಿದರು. ಆರ್.ರುದ್ರೇಶ್, ಪ್ರಸನ್ನಕುಮಾರ್ ಇದ್ದಾರೆ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಾಲುಬಾಯಿ ರೋಗದ ಲಸಿಕೆ ಅಭಿಯಾನ
ಎಂಟನೇ ಸುತ್ತಿನ ಅಭಿಯಾನ
ಲಸಿಕೆ ಹಾಕಿಸಿದರೆ ಒಳಿತು
ಹೊಳೆಹೊನ್ನೂರು: ಕಾಲುಬಾಯಿ ಜ್ವರ ಹೈನುಗಾರಿಕೆ, ಆರ್ಥಿಕತೆಗೆ ನಷ್ಟ ಉಂಟುಮಾಡುವ ಮಾರಕ ರೋಗ ಎಂದು ಪಶುವೈದ್ಯಾಧಿಕಾರಿ ಕೆ.ಎನ್.ಬೃಂದಾ ಹೇಳಿದರು.
ಸಮೀಪದ ಡಣಾಯಕಪುರದಲ್ಲಿ ಸೋಮವಾರ ಎಂಟನೇ ಸುತ್ತಿನ ಕಾಲುಬಾಯಿ ರೋಗದ ಲಸಿಕೆ ಕಾರ್ಯಾಗಾರದಲ್ಲಿ ಮಾತನಾಡಿದರು.
ಕಾಯಿಲೆಯಿಂದ ಗುಣಮುಖವಾದ ಮೇಲೂ ರಾಸುಗಳಿಗೆ ಗರ್ಭಕಟ್ಟುವ ವಿಳಂಬ ಸೇರಿ ಹತ್ತಾರು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ರೋಗದಿಂದ ಸಂಪೂರ್ಣ ರಕ್ಷಣೆ ಪಡೆಯಲು ರಾಸುಗಳಿಗೆ ಲಸಿಕೆ ಹಾಕಿಸುವುದು ಅಗತ್ಯ. ಕಾಲುಬಾಯಿ ರೋಗ ಬಾಧಿಸುವ ಪಶುಗಳನ್ನು ಗುರುತಿಸಿ ಆದಷ್ಟು ಬೇಗ ಚಿಕಿತ್ಸೆ ನೀಡಬೇಕು ಎಂದರು.
ರಾಸುಗಳಿಗೆ ಲಸಿಕೆ ನೀಡುವುದರೊಂದಿಗೆ ಕೊಟ್ಟಿಗೆಗಳಲ್ಲಿ ಶುಶ್ರೂಷೆ ಮಾಡುವುದರಿಂದ ರೋಗಗಳಿಂದ ದೂರವಾಗಬಹುದು. ನಿಯಮಿತವಾಗಿ ಲಸಿಕೆ ನೀಡಿದರೆ ಪಶುಗಳನ್ನು ಹತ್ತಾರು ಕಾಯಿಲೆಗಳಿಂದ ದೂರವಿಡಬಹುದು. ಗ್ರಾಪಂ ಮಟ್ಟದಲ್ಲಿ ಸ್ವಯಂಸೇವಕರನ್ನು ನೇಮಕಮಾಡಿ ಗ್ರಾಮದ ವ್ಯಾಪ್ತಿಯ ಜಾನುವಾರುಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.
ಪಶು ಆಸ್ಪತ್ರೆ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿ ಲಸಿಕೆ ಸೇರಿ ಮಾಹಿತಿ ನೀಡುತ್ತಿದ್ದಾರೆ. ರಾಸುಗಳಿಗೆ ಪೌಷ್ಟಿಕ ಆಹಾರ ನೀಡಿದರೆ ಹಾಲಿನ ಪ್ರಮಾಣ ಹೆಚ್ಚಾಗುತ್ತದೆ ಎಂದರು. ಜಾನುವಾರು ಅಧಿಕಾರಿ ಆರ್.ರುದ್ರೇಶ್, ಪಿ.ಆರ್.ಪ್ರಸನ್ನ ಕುಮಾರ್, ಸತೀಶ್ ಪಟೇಲ್ ಇತರರಿದ್ದರು.