ಸ್ವಾತಂತ್ರೃದ ಓಟ ನಾಟಕ ಪ್ರದರ್ಶನ 25, 26ಕ್ಕೆ I drama play

ಸ್ವಾತಂತ್ರೃದ ಓಟ ನಾಟಕದ ಪೋಸ್ಟರ್‌ಅನ್ನು ಎ.ಸಿ.ಶೈಲಜಾ, ಪ್ರಸನ್ನ ಡಿ.ಸಾಗರ, ನಟರಾಜ್ ಹೊನ್ನವಳ್ಳಿ ಬಿಡುಗಡೆ ಮಾಡಿದರು.
ಸ್ವಾತಂತ್ರೃದ ಓಟ ನಾಟಕದ ಪೋಸ್ಟರ್‌ಅನ್ನು ಎ.ಸಿ.ಶೈಲಜಾ, ಪ್ರಸನ್ನ ಡಿ.ಸಾಗರ, ನಟರಾಜ್ ಹೊನ್ನವಳ್ಳಿ ಬಿಡುಗಡೆ ಮಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿವಮೊಗ್ಗ ರಂಗಾಯಣದಿಂದ ರಂಗ ಪ್ರಯೋಗ
  • ನಟರಾಜ್ ಹೊನ್ನವಳ್ಳಿ ನಿರ್ದೇಶನದ ನಾಟಕ
ಶಿವಮೊಗ್ಗ: ಕೇಂದ್ರ (central) ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಬೋಳುವಾರು ಮೊಹಮ್ಮದ್ ಕುಂಞ ರಚನೆಯ ಬೃಹತ್ ಕಾದಂಬರಿ (novel) ಸ್ವಾತಂತ್ರೃದ ಓಟವನ್ನು ರಂಗಭೂಮಿಗೆ ರೂಪಾಂತರಿಸಲಾಗಿದೆ ಎಂದು ಶಿವಮೊಗ್ಗ ರಂಗಾಯಣ (rangayana) ನಿರ್ದೇಶಕ ಪ್ರಸನ್ನ ಡಿ.ಸಾಗರ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಏ.25 ಹಾಗೂ 26ರ ಸಂಜೆ 6.30ಕ್ಕೆ ಸ್ವಾತಂತ್ರೃದ ಓಟ ನಾಟಕ ಪ್ರದರ್ಶನ ನಡೆಯಲಿದೆ. ಏ.28ರ ಬಳಿಕ ರಾಜ್ಯದ ವಿವಿಧ ಭಾಗಗಳಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾದಂಬರಿಯ ರಂಗರೂಪಕ್ಕೆ ರಾಜ್ಯ ಸರ್ಕಾರ ಒಂದು ಕೋಟಿ ರೂ. ಅನುದಾನ ನೀಡಿದೆ. ರಂಗರೂಪಕ್ಕೆ ತರುವ ಜವಾಬ್ದಾರಿಯನ್ನು ಶಿವಮೊಗ್ಗ ರಂಗಾಯಣಕ್ಕೆ ವಹಿಸಲಾಗಿದೆ. 8 ಮಂದಿ ಸಲಹಾ ಸಮಿತಿ ರಂಗಾಯಣಕ್ಕೆ ಮಾರ್ಗದರ್ಶನ ಮಾಡಿದೆ ಎಂದರು.
ಕಾದಂಬರಿಯ ಆಯ್ದ ಭಾಗಗಳನ್ನು ತೆಗೆದುಕೊಂಡು ಮಂಜುನಾಥ್ ಎಲ್.ಬಡೇದಹಳ್ಳಿ ರಂಗರೂಪಕ್ಕೆ ತಂದಿದ್ದಾರೆ. ನಟರಾಜ್ ಹೊನ್ನವಳ್ಳಿ ನಿರ್ದೇಶನ ಇದ್ದು, ರಾಜ್ಯದ ವಿವಿಧೆಡೆ ಆಯ್ಕೆಯಾದ 22 ಪ್ರತಿಭಾವಂತ ಕಲಾವಿದರು ಅಭಿನಯಿಸುವರು. ಸಲ್ಮಾ ದಂಡಿನ್ ಸಹನಿರ್ದೇಶನ ಇದ್ದು, ರಾಘವ ಕಮ್ಮಾರ ಸಂಗೀತ ನೀಡಿದ್ದಾರೆ ಎಂದು ತಿಳಿಸಿದರು.
ಡಾ. ಸಹನಾ ಪಿಂಜಾರ ವಸ್ತ ವಿನ್ಯಾಸ ಮಾಡಿದ್ದು, ಬಿ.ಆರ್.ಮಧುಸೂದನ್, ರಮೇಶ್ ಎಸ್.ಮೈಸೂರು, ಶಂಕರ ಬೆಳ್ಳಕಟ್ಟೆ ರಂಗ ಸಜ್ಜಿಕೆಯಲ್ಲಿ, ಮಂಜು ನಾರಾಯಣ ಬೆಳಕು, ಅಕ್ಷರ ವೇಣುಗೋಪಾಲ್ ಧ್ವನಿ ವಿನ್ಯಾಸ ಮಾಡಿದ್ದಾರೆ ಎಂದರು.
ರಂಗನಿರ್ದೇಶಕ ನಟರಾಜ್ ಹೊನ್ನವಳ್ಳಿ, ಶಿವಮೊಗ್ಗ ರಂಗಾಯಣದ ಆಡಳಿತಾಧಿಕಾರಿ ಎ.ಸಿ.ಶೈಲಜಾ ಸುದ್ದಿಗೋಷ್ಠಿಯಲ್ಲಿದ್ದರು.
"

ಸ್ವಾತಂತ್ರೃದ ಓಟ ನಾಟಕ ಪ್ರಸ್ತುತ ಸಾಮಾಜಿಕ ಹಾಗೂ ರಾಜಕೀಯ ಸಂಘರ್ಷಗಳಿಗೆ ಕನ್ನಡಿ ಹಿಡಿಯುತ್ತದೆ. ದೇಶ ವಿಭಜನೆಯ ಸಂದರ್ಭದಲ್ಲಿ ಅನಿವಾರ್ಯವಾಗಿ ಸಿಲುಕಿಕೊಳ್ಳುವ ಸಾಮಾನ್ಯ ಜನರ ಬವಣೆ ಮತ್ತು ಅಸ್ಮಿತೆಯ ಹುಡುಕಾಟವನ್ನು ನಾಟಕ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net